ಆತಂಕದ ನಡುವೆಯೂ ತಮ್ಮ ಆರೋಗ್ಯ ವನ್ನು ಲೆಕ್ಕಿಸದೆ ಪುರಸಭಾ ವ್ಯಾಪ್ತಿಯಲ್ಲಿ ಶುಚಿತ್ವದ ಕೆಲಸ ಮಾಡುವ ಪೌರಕಾರ್ಮಿಕರು ಮತ್ತು ಮನೆಮನೆಗೆ ಬೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತೆರಳುವ ಆಶಾಕಾರ್ಯಕರ್ತೆಯರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ದಿನಬಳಕೆಯ ವಸ್ತುಗಳ ವಿತರಣೆ ಮಾಡಿದ ಶಾಸಕ ರಾಜೇಶ್ ನಾಯ್ಕ್.

ಬಂಟ್ವಾಳ: ಬಂಟ್ವಾಳ ಪುರಸಭೆಯ ಸುಮಾರು ೪೫ ಪೌರ ಕಾರ್ಮಿಕರು ಕೊರೊನಾ ವೈರಸ್ ಆತಂಕದ ನಡುವೆಯೂ ನಿರಂತರವಾಗಿ ಕಸ ವಿಲೇವಾರಿಯ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಮ್ಮ ವತಿಯಿಂದ ಪುರಸಭಾ ಕಚೇರಿಯ ಆವರಣದಲ್ಲಿ ಅಕ್ಕಿ ಹಾಗೂ ನಗದು ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಕೊರೊನಾ ವೈರಸ್ ಆತಂಕದಿಂದ ನಾವು ಮನೆಯಲ್ಲಿ ಕೂತರೂ, ಪೌರ ಕಾರ್ಮಿಕರು ಕೆಲಸ ಮಾಡಬೇಕಿರುವುದು ಅನಿವಾರ್ಯ. ಹೀಗಾಗಿ ಅವರಿಗೆ ಧೈರ್ಯ ತುಂಬಲು ನೆರವನ್ನು ನೀಡಲಾಗುತ್ತಿದೆ. ಜತೆಗೆ ಜನರ ಆರೋಗ್ಯಕ್ಕಾಗಿ ದುಡಿಯುವ ಆಶಾ ಕಾರ್ಯಕರ್ತೆಯರಿಗೂ ಅಕ್ಕಿ ವಿತರಿಸಲಾಗುತ್ತದೆ ಎಂದರು. ಕೊರೊನಾ ದೂರ ಮಾಡುವ ನಿಟ್ಟಿನಲ್ಲಿ ಬಂಟ್ವಾಳದ ಜನತೆ ಮನೆಯಲ್ಲೇ ಇದ್ದು, ಈ ಖಾಯಿಲೆಯನ್ನು ದೂರ ಮಾಡಬೇಕಿದೆ ಎಂದು ಮನವಿ ಮಾಡಿದರು.
ಬಳಿಕ ನಗರ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ| ವಾಣಿಶ್ರೀ ಅವರು ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ಶಾಸಕರು ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡು ಪರಿಸರದಲ್ಲಿರುವ ನಿರ್ಗತಿಕರಿಗೆ ಊಟ ವಿತರಿಸಿದರು.

ನಾಳೆಯಿಂದ ಆಶಾಕಾರ್ಯಕರ್ತೆಯರಿಗೂ ಇದೇ ಮಾದರಿಯಲ್ಲಿ ಕಿಟ್ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು, ಹರಿಪ್ರಸಾದ್, ಪುರಸಭಾ ಮುಖ್ಯಾಽಕಾರಿ ಲೀಲಾ ಬ್ರಿಟ್ಟೊ, ತಾಲೂಕು ಆರೋಗ್ಯಾಽಕಾರಿ ಡಾ| ದೀಪಾ ಪ್ರಭು, ಪರಿಸರ ಎಂಜಿನಿಯರ್ ಯಾಸ್ಮಿನ್ ಪುರಸಭಾ ಸಿಬಂದಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here