


ಪುಂಜಾಲಕಟ್ಟೆ: ಗ್ರಾಮಾಂತರ ಪ್ರದೇಶದಲ್ಲಿ ಪೋಲೀಸರು ಬರಲ್ಲ ಅಂದುಕೊಂಡಿದ್ದರೆ ಅದು ನಿಮ್ಮ ಶುದ್ಧ ತಪ್ಪು !
ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಗಳ ವರೆಗೆ ಅಗತ್ಯ ಸಾಮಾಗ್ರಿಗಳನ್ನು ಆಮದು ಮಾಡಿಕೊಳ್ಳಲು ಜಿಲ್ಲಾಡಳಿತ ನೀಡಿದ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತೀರಾ ? ಅದಕ್ಕೆ ನೋಡಿ ನಿಮಗೆ ಈ ಶಿಕ್ಷೆ ಅಂತ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಅವರು ಇಂದು ಕಾರ್ಯಚರಣೆಕ್ಕಿಳಿದವರು ಒಂದ ಎರಡ ಬರೋಬ್ಬರಿ 12 ಬೈಕ್ 1 ಅಟೋ ಹಾಗೂ 1 ಪಿಕಪ್ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾಡಳಿತದ ಲಾಕ್ ಡೌನ್ ಆದೇಶವನ್ನು ಮೀರಿ ತಿರುಗಾಟ ನಡೆಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಪೋಲೀಸರು ಏನು ಮಾಡಲ್ಲ ಅಂದುಕೊಂಡು ತಿರುಗಾಟ ನಡೆಸುವುದು ಜಾಸ್ತಿಯಾಯಿತು
ಇದನ್ನು ಮನಗಂಡ ಜಿಲ್ಲೆಯ ಪೋಲೀಸರು ಕಾರ್ಯಚರಣೆಗೆ ಮುಂದಾಗಿದ್ದಾರೆ.





