Wednesday, October 18, 2023

ಮನೆ ಭೇಟಿ ಮಾಡುವ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆಯರಿಗೆ ನಿಂದನೆ: ಠಾಣೆಗೆ ದೂರು

Must read

ಬಂಟ್ವಾಳ: ಹೋಂ.ಕ್ವಾರಂಟೈನ್ ಹಾಗೂ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಮನೆ ಮನೆ ಭೇಟಿ ಮಾಡುವ ಆರೋಗ್ಯ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನಿಂದಿಸಿದ ಘಟನೆ ಕರಿಯಂಗಳ ಗ್ರಾಮದಲ್ಲಿ ನಡೆದಿದೆ.
ಕರಿಯಂಗಳ ಗ್ರಾಮದ ಬಡಕಬೈಲು ಅಬ್ದುಲ್ ಲತೀಫ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು,  ಪೋಲೀಸರಿಗೆ ದೂರು ನೀಡಲಾಗಿದೆ.
ಕೊರೊನಾ ವ್ಯೆರಾಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಹಾಗು ರಾಜ್ಯಸರಕಾರ ಕಟ್ಟುನಿಟ್ಟಿನ ಅದೇಶವನ್ನು ಜಿಲ್ಲಾಡಲಿತಕ್ಕೆ ನೀಡಿದ್ದು ಅಯಾಯ ಗ್ರಾಮದ ಆರೋಗ್ಯಧಿಕಾರಿಗಳು ಬಹಳ ಮುಂಜಾಗ್ರತೆಯಿಂದ ದೂರದೂರಿನಿಂದ ಯಾರದರು ಬಂದರೆ ಅವರ ಅರೋಗ್ಯ ವಿಚಾರಿಸುತ್ತಿದ್ದು ಇಂದು ಗುರುವಾರ ಕರಿಯಂಗಳ ಗ್ರಾಮದ ಬಡಕಬೈಲ್ ಸಮೀಪ‌ದ ಮಣಿಕಂಠಪುರದ ಕೆಳಗಿನ ರಸ್ತೆಯ ಅಬ್ದುಲ್ ಲತೀಫ್ ಎಂಬವರ ಮನೆಗೆ ಅವರ ಅಳಿಯ ಮಗಳ ಗಂಡ ಮಹಮ್ಮದ್ ಆರಿಫ್ ಎಂಬವರು ಕಳೆದ ನಾಲ್ಕು ದಿನದಿಂದ ಮೀನು ವ್ಯಾಪಾರದಲ್ಲಿ ಕೊಚ್ಚಿಯಲ್ಲಿದ್ದು ಅವರ ಮನೆ ದೇರಳಕಟ್ಟೆಗೆ ಹೋಗಿ ಅಲ್ಲಿಂದ ಮಾವನ ಮನೆಗೆ‌ ಬಂದ. ವಿಷಯ ತಿಳಿದು ಸಹಾಯಕ ಆರೊಗ್ಯಧಿಕಾರಿ ಹಾಗೂ ಆಶಾಕಾರ್ಯಕರ್ತೆ ಅವರ ಮನೆಯನ್ನು ಸಂಪರ್ಕಿಸಿದಾಗ ಉಡಾಪೆಯಿಂದ ವರ್ತಿಸಿ ನಿಂದಿಸಿದ್ದಾರೆ ಎಂದು ಅವರು ಕರಿಯಂಗಳ ಗ್ರಾಮ ಪಂಚಾಯತ್ ಪಿಡಿಓ ಮತ್ತು ಬಂಟ್ವಾಳ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪಂಚಾಯತಿ ಸದಸ್ಯರಾದ ಸುರೇಶ್ ಮಣಿಕಂಠಪುರ ಹಾಗು ನವಾಜ್, ಬಸೀರ್ ಅಗಮಿಸಿ ಮನೆಯವರಲ್ಲಿ ಮಾತಾಡಿದ್ದಾರೆ. ಮುಂದಿನ ಕ್ರಮಗಳ ಬಗ್ಗೆ ಪೊಲೀಸರ ಆಗಮನದ ಬಳಿಕ ಗೊತ್ತಾಗಬೇಕಷ್ಟೆ.

More articles

Latest article