ಬಂಟ್ವಾಳ: ಕೊರೊನಾ ವೈರಸ್ ತಡೆಯಲು ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆರೆದುಕೊಂಡು ನಿಷೇಧಾಜ್ಞೆ ಜಾರಿ ಮಾಡಿದೆ. ಇದರ ಪರಿಣಾಮಕಾರಿ ಅನುಷ್ಠಾನ ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯಕ್ಕಾಗಿ ಗ್ರಾಮವಾರು ಫ್ಲೈಯಿಂಗ್ ಸ್ವ್ಕಾಡ್ ಗಳನ್ನೂ ನೇಮಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 12 ಮಂದಿ ಅಧಿಕಾರಿಗಳಿಗೆ ಗ್ರಾಮಗಳನ್ನು ವಿಂಗಡಿಸಿ ಜವಾಬ್ದಾರಿ ನೀಡಲಾಗಿದೆ.

ಬಂಟ್ವಾಳ ಸಾಮಾಜಿಕ ಅರಣ್ಯ ಅಧಿಕಾರಿ ರಾಜೇಶ್ ಬಳೆಗಾರ್ ಅವರಿಗೆ ಕಾವಳಪಡೂರು, ಕಾಡಬೆಟ್ಟು, ಕಾವಳಮೂಡೂರು, ಮೂಡುಪಡುಕೋಡಿ, ದೇವಶ್ಯಮೂಡೂರು, ಕುಡಂಬೆಟ್ಟು, ಪಿಲಾತಬೆಟ್ಟು, ಅಬಕಾರಿ ನಿರೀಕ್ಷಕಿ ಶೋಭಾ ಅವರಿಗೆ ಪಿಲಿಮೊಗರು, ಮೂಡನಡುಗೋಡು, ಪಂಜಿಕಲ್ಲು, ಬುಡೋಳಿ, ಚೆನ್ನೈತೋಡಿ,  ಅಜ್ಜಿಬೆಟ್ಟು, ಎಲಿಯನಡುಗೋಡು, ಇರ್ವತ್ತೂರು.

ಬಂಟ್ವಾಳ ಪುರಸಭಾ ಪರಿಸರ ಎಂಜಿನಿಯರ್ ಯಾಸ್ಮಿನ್ ಅವರಿಗೆ ಬಿ.ಕಸ್ಬಾ, ಕೂರಿಯಾಳ, ಅಮ್ಟಾಡಿ, ಅರಳ, ರಾಯಿ, ಕೊಯಿಲ, ಕರ್ಪೆ, ಸಂಗಬೆಟ್ಟು, ಕುಕ್ಕಿಪಾಡಿ.

ವಾಣಿಜ್ಯ ತೆರಿಗೆ ಅಧಿಕಾರಿ ಅಕ್ಷತಾ ಅವರಿಗೆ ನಾವೂರು, ದೇವಸ್ಯಪಡೂರು, ಸರಪಾಡಿ, ಮಣಿನಾಲ್ಕೂರು, ಉಳಿ, ಲೋಕೋಪಯೋಗಿ ಎಂಜಿನಿಯರ್ ಷಣ್ಮುಗಂ ಅವರಿಗೆ ಸಜೀಪನಡು, ಸಜೀಪಪಡು, ಕುರ್ನಾಡು, ಫಜೀರು, ಬಾಳೆಪುಣಿ, ನರಿಂಗಾನ, ಎಪಿಎಂಸಿ ಕಾರ್ಯದರ್ಶಿ ಭಾರತಿ ಅವರಿಗೆ ಬಾಳ್ತಿಲ, ಗೋಳ್ತಮಜಲು, ಬರಿಮಾರು, ಕಡೇಶ್ವಾಲ್ಯ, ಸಜೀಪಮೂಡ, ಸಜೀಪಮುನ್ನೂರು, ಮಂಚಿ, ಇರಾ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರಿಗೆ ಬಿ.ಮೂಡಾ, ಪಾಣೆಮಂಗಳೂರು, ನರಿಕೊಂಬು, ಶಂಭೂರು, ಬಿಇಒ ಜ್ಞಾನೇಶ್ ಅವರಿಗೆ ಬಡಗಬೆಳ್ಳೂರು, ಕರಿಯಂಗಳ, ಅಮ್ಮುಂಜೆ, ಕಳ್ಳಿಗೆ, ತುಂಬೆ, ಪುದು, ವಿಟ್ಲ ಪ.ಪಂ.ಮುಖ್ಯಾಧಿಕಾರಿ ಮಾಲಿನಿ ಅವರಿಗೆ ವಿಟ್ಲ ಕಸಬಾ, ತಾ.ಪಂ.ಇಒ ರಾಜಣ್ಣ ಅವರಿಗೆ ಕರೋಪಾಡಿ, ಮಾಣಿಲ, ಪೆರುವಾಯಿ, ಕೊಳ್ನಾಡು, ಸಾಲೆತ್ತೂರು, ವಿಟ್ಲಪಡ್ನೂರು, ಪಂಚಾಯತ್‌ ರಾಜ್ ಜೆಇ ಜಗದೀಶ್ ಅವರಿಗೆ ವೀರಕಂಭ, ಬೋಳಂತೂರು, ವಿಟ್ಲಮುಡ್ನೂರು, ಅಳಿಕೆ, ಪುಣಚ, ಕೇಪು, ತೋಟಗಾರಿಕಾ ಇಲಾಖೆಯ ದಿನೇಶ್ ಅವರಿಗೆ ಅನಂತಾಡಿ, ನೆಟ್ಮಮುಡ್ನೂರು, ಪೆರಾಜೆ, ಮಾಣಿ, ಕೆದಿಲ, ಪೆರ್ನೆ, ಬಿಳಿಯೂರು, ಇಡ್ಕಿದು, ಕುಳ ಗ್ರಾಮಗಳ ಜವಾಬ್ದಾರಿ ನೀಡಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here