






ಬಂಟ್ವಾಳ: ಇಡೀ ಜಗತ್ತು ಕೊರೊನಾ ಭೀತಿಯಿಂದ ಲಾಕ್ ಡೌನ್ ಆದೇಶ ಮಾಡಿದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ , ಕೆಲವು ಪ್ಯಾಕೇಜ್ ಗಳನ್ನೂ ಘೋಷಣೆ ಮಾಡಿದೆ.
ಅದರಲ್ಲಿ ಮೆಸ್ಕಾಂ ಇಲಾಖೆಯದ್ದು ಏನಪ್ಪ ಅಂತ ಕೇಳಿದರೆ .. ಮೂರು ತಿಂಗಳ ಕಾಲ ವಿದ್ಯುತ್ ಬಿಲ್ ಕಟ್ಟದಿದ್ದರೂ ಕೇಳುವಂತಿಲ್ಲವ, ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿಲ್ಲ ಆದರೆ ಮೂರು ತಿಂಗಳ ಬಳಿಕ ಪಾವತಿಸಲೇ ಬೇಕಂತೆ. ಈಗಾಗಲೇೇ ಉದ್ಯೋಗವಿಲ್ಲಲದೆ, ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಬಳಕೆದಾರರು ಮೂರು ತಿಂಗಳ ವಿದ್ಯುತ್ ಬಿಲ್ ನ್ನು ಒಮ್ಮೆಲೆ ಕಟ್ಟಲು ಹೇಗೆ ಸಾಧ್ಯ. ಎಂಬುದನ್ನು ಸರಕಾರ ವಯಾಕೆ ಯೋಚನೆ ಮಾಡಿಲ್ಲ ಎಂಬ ಅಂಶ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಅತ್ತ ಉದ್ಯೋಗವಿಲ್ಲ, ಇತ್ತ ಕೈಯಲ್ಲಿ ಕಾಸಿಲ್ಲ
ಮೂರು ಹೊತ್ತಿಗೆ ಹೊಟ್ಟೆಗೆ ಹಿಟ್ಟಿಲ್ಲದೆ ದಿನ ದೂಡುವುದೇ ಕಷ್ಟ ಎಂಬ ಪರಿಸ್ಥಿತಿ ಯನ್ನು ಎದುರುನೋಡುತ್ತಿರುವಾಗ ಒಂದು ವೇಳೆ ಕೊರೊನಾ ಲಾಕ್ ಡೌನ್ ಮುಗಿದ ಬಳಿಕ ಒಮ್ಮೆಲೆ ಹಣ ಪಾವತಿ ಮಾಡಲು ಇಲಾಖೆ ಸೂಚಿಸಿದರೆ ಕಷ್ಟ ವಾಗಬಹುದು ಹಾಗಾಗಿ ಮೆಸ್ಕಾಂ ಇಲಾಖೆ ಈ ಮೂರು ತಿಂಗಳ ಮನೆಗಳ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಬೇಕು, ರೀಡಿಂಗ್ ಕೂಡಾ ಮಾಡಬಾರದು ಎಂದು ಮಾಜಿ ಬೂಡಾ ಅಧ್ಯಕ್ಷ ಸದಾಶಿವ ಬಂಗೇರ ಸರಕಾರ ಕ್ಕೆ ಒತ್ತಾಯಿಸಿದ್ದಾರೆ.
ಕೇವಲ ಬಡ್ಡಿ ಮನ್ನಾ ಮಾಡುವುದರಿಂದ ಯಾವುದೇ ಲಾಭವಿಲ್ಲ, ಹಾಗಾಗಿ ಮನೆಯ ವಿದ್ಯುತ್ ಬಿಲ್ ಮನ್ನಾ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ.
ರೀಡಿಂಗ್ ಆರಂಭ
ಕೊರೋನ ಭೀತಿಯಲ್ಲೇ ಜನತೆ ನಲುಗುತ್ತಿರುವ ನಡುವೆ, ಮೆಸ್ಕಾಂ ನ ಹೊರಗುತ್ತಿಗೆ ಸಿಬ್ಬಂದಿಗಳು ಮೀಟರ್ ರೀಡಿಂಗ್ ಆರಂಭಿಸಿದ್ದಾರೆ. ಆದರೆ ನೂರಾರು ಜನ ಸಿಬ್ಬಂದಿಗಳು ತರತುರಿಯಲ್ಲಿ ಮೀಟರ್ ರೀಡಿಂಗ್ ಮಾಡಲು ಇಲಾಖೆ ಅನುಮತಿ ನೀಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಪ್ರಧಾನಿ ವಿಧಿಸಿರುವ 21 ದಿನಗಳ ಲಾಕ್ ಡೌನ್ ನಲ್ಲಿ ಇನ್ನೂ ಹದಿನಾಲ್ಕು ದಿನಗಳು ಬಾಕಿ ಇದ್ದು, ಅಗತ್ಯವಿರುವ ಇಲಾಖೆಗಳು ಮಾತ್ರ ಸಾರ್ವಜನಿಕ ಸೇವೆ ನೀಡುವಂತೆ ಸರ್ಕಾರವೇ ನಿರ್ದೇಶನ ನೀಡಿತ್ತು.
ಆದರೆ ಮೆಸ್ಕಾಂ ಇಲಾಖೆಯ ಮೀಟರ್ ರೀಡಿಂಗ್ ಅವಶ್ಯಕತೆ ಯ ಸೆಕ್ಟರ್ ನಲ್ಲಿ ಬರುತ್ತಾ? ಅಗತ್ಯ ವಾ ? ಅನ್ನುವ ಪ್ರಶ್ನೆ ಮೂಡುತ್ತದೆ. ಸಿಬ್ಬಂದಿಗಳು
ಮನೆಮನೆಗೆ ರೀಡಿಂಗ್ ಗೆ ತೆರಳಿದ ಸಂದರ್ಭದಲ್ಲಿ ವೈರಸ್ ತಗಲುವ ಸಂಧರ್ಬಗಳು ಹೆಚ್ಚು ಇರುವುದರಿಂದ ಇಲಾಖೆ ಈ ಬಗ್ಗೆ ಪರಿಶೀಲನೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇಂದಿನಿಂದ ಮನೆಗೆ ಮೀಟರ್ ರೀಡಿಂಗ್ ಮಾಡಲು ಬರುತ್ತಾರೆ. ಸರಕಾರ ಎಲ್ಲಿ ಮೂರು ತಿಂಗಳ ಬಿಲ್ ಪಾವತಿ ಮಾಡಲು ಇಲ್ಲ ಅಂತ ಹೇಳಿಲ್ಲ, ಲಾಕ್ ಡೌನ್ ಅದ್ದರಿಂದ ಮೂರು ತಿಂಗಳ ಕಾಲ ಬಿಲ್ ಪಾವತಿ ಮಾಡಲು ಮನೆಯಿಂದ ಹೊರ ಬರುವಂತಿಲ್ಲ. ಅ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಅವಕಾಶ ನೀಡಲಾಗಿದೆ.
ಆನ್ ಲೈನ್ ಮೂಲಕ ಪೇ ಮಾಡುವವರು ಹಣ ಪಾವತಿ ಮಾಡಬಹುದು ಎಂದು ಮಂಗಳೂರು ಮೆಸ್ಕಾಂ ಎಂ.ಡಿ ಸ್ನೇಹಲ್ ತಿಳಿಸಿದ್ದಾರೆ. ಮೀಟರ್ ರೀಡ್ ಮಾಡುವ ಇಲಾಖಾ ಹಾಗೂ ಹೊರಗುತ್ತಿಗೆಯ ಎಲ್ಲಾ ಸಿಬ್ಬಂದಿ ಗಳು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
ನಿಯಮಗಳನ್ನು ಪಾಲಿಸಬೇಕು ಎಂದು ಆದೇಶ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.





