ಬೆಂಗಳೂರು : ರಾಜ್ಯದ ವಿವಿಧೆಡೆ ಇಂದು 9 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದಾಗಿ ಅಧಿಕೃತವಾಗಿ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು 9 ಜನರಿಗೆ ರಾಜ್ಯದ ಅನೇಕ ಕಡೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ದೃಢಪಡಿಸಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ಇಂದು ಎಲ್ಲೆಲ್ಲಿ ಕೊರೊನಾ ಸೋಂಕು ದೃಢ.?

ಬೆಂಗಳೂರಿನ 24 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಯಾರಿಂದ ಬಂತು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮೈಸೂರು ಜಿಲ್ಲೆಯ ನಂಜನಗೂಡಿನ 37 ವರ್ಷದ ವ್ಯಕ್ತಿಗೆ 52ನೇ ಕೊರೊನಾ ಸೋಂಕು ಪೀಡಿತ ವ್ಯಕ್ತಿಯಿಂದ ಸೋಂಕು ತಗುಲಿರುವುದು ದೃಢ ಪಟ್ಟಿದೆ
ಮೈಸೂರು ಜಿಲ್ಲೆಯ ನಂಜನಗೂಡಿನ 27 ವರ್ಷದ ವ್ಯಕ್ತಿಗೆ 52ನೇ ಸೋಂಕಿತ ವ್ಯಕ್ತಿಯಿಂದ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಂಗಳೂರಿನ 33 ವರ್ಷದ ವ್ಯಕ್ತಿಗೆ 103ನೇ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರಿಂದ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ 49 ವರ್ಷದ ವ್ಯಕ್ತಿ ಮಾರ್ಚ್ 20ರಂದು ದುಬೈಗೆ ಪ್ರಯಾಣ ಮಾಡಿ ಹಿಂದಿರುಗಿರುತ್ತಾರೆ. ಇಂತಹ ವ್ಯಕ್ತಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ.
ಬೆಂಗಳೂರಿನ 62 ವರ್ಷದ ವ್ಯಕ್ತಿಯೊಬ್ಬರು ಮಾರ್ಚ್ 18ರಂದು ಸ್ಪೇನ್ ದೇಶಕ್ಕೆ ತರೆಳಿ, ವಾಪಾಸ್ ಆಗಿರುತ್ತಾದೆ. ಈ ವ್ಯಕ್ತಿಗೂ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕೇರಳ ರಾಜ್ಯದ 63 ವರ್ಷದ ವ್ಯಕ್ತಿಯೊಬ್ಬ ಜರ್ಮನಿಗೆ ಪ್ರಯಾಣ ಮಾಡಿ, ಮಾರ್ಚ್ 21ರಂದು ಬೆಂಗಳೂರಿಗೆ ಆಗಮಿಸಿರುತ್ತಾರೆ. ಅವರಿಗೂ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಮೈಸೂರಿನ 63 ವರ್ಷದ ವ್ಯಕ್ತಿಯೊಬ್ಬರು 52ನೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರಿಂದಾಗಿ, ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಮೈಸೂರಿನ 27 ವರ್ಷದ ಮಹಿಳೆ 52ನೇ ಸೋಂಕಿತ ವ್ಯಕ್ತಿಯ ಪತ್ನಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಮೂಲಕ 52ನೇ ಸೋಂಕಿತ ವ್ಯಕ್ತಿಯಿಂದ ಇದುವರೆಗೆ 16 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲಾವಾರು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೀಗಿದೆ

ಬೆಂಗಳೂರು – 48
ಮೈಸೂರು – 19
ಚಿಕ್ಕಬಳ್ಳಾಪುರ – 09
ದಕ್ಷಿಣ ಕನ್ನಡ – 09
ಉತ್ತರಕನ್ನಡ – 08
ಕಲಬುರ್ಗಿ – 04
ದಾವಣಗೆರೆ – 03
ಉಡುಪಿ – 03
ಬಳ್ಳಾರಿ – 03
ತುಮಕೂರು – 02
ಕೊಡಗು – 01
ಧಾರವಾಡ – 01
ಒಟ್ಟಾರೆಯಾಗಿ ಇಂದು 9 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.
ಅಲ್ಲದೇ ಇದುವರೆಗೆ 3 ಜನರು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಬಲಿಯಾಗಿದ್ದಾರೆ. 9 ಕೊರೊನಾ ಸೋಂಕು ತಗುಲಿದ್ದವರು ಸಂಪೂರ್ಣವಾಗಿ ಗುಣಮುಕರಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here