Sunday, October 22, 2023

ಕೊರೋನಾ ನಿಯಂತ್ರಣ ಬಂಟ್ವಾಳದ ಉತ್ತಮ ಸ್ಪಂದನೆ

Must read

ಬಂಟ್ವಾಳ: ಕೊರೋನಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ನೀಡುತ್ತಿರುವ ಸೂಚನೆಗಳನ್ನು ಬಂಟ್ವಾಳ ತಾಲೂಕಿನಲ್ಲಿ ತಹಶೀಲ್ದಾರ್ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುತ್ತಿದ್ದು ಬಂಟ್ವಾಳ ಕ್ಷೇತ್ರದ ಜನತೆಯಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಹೇಳಿದರು. ಬಿಸಿರೋಡಿನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿಯಂತ್ರಣಕ್ಕೆ ತಾಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ , ಆರೋಗ್ಯ ಇಲಾಖೆಯ 345 ಕಾರ್ಯಕರ್ತೆಯರು ಸುಮಾರು 6000 ಮನೆ ಭೇಟಿಯ ಮೂಲಕ 65896 ಜನರನ್ನು ಭೇಟಿ ಮಾಡಿ ಜಾಗೃತಿ ಮೂಡಿಸಿದ್ದಾರೆ ಎಂದರು. ಮಾರ್ಚ್ 31ರಂದು ಬೆಳಗ್ಗೆ ಆರರಿಂದ 3 ಗಂಟೆಯ ವರೆಗೆ ಜಿಲ್ಲಾಡಳಿತ ದಿನಸಿ ಅಂಗಡಿಗಳ ತೆರೆಯುವಿಕೆಗೆ ಅವಕಾಶವನ್ನು ನೀಡಿದ್ದು ಈ ಸಂದರ್ಭದಲ್ಲಿ ಎಲ್ಲ ನಾಗರಿಕರು ಸಂಯಮದಿಂದ ವರ್ತಿಸಿ ಸಾಮಾಜಿಕ ಅಂತರವನ್ನು ಕೊಳ್ಳುವುದರ ಮೂಲಕ ಕೊರೋನ ವೈರಸ್ ಹರಡದಂತೆ ಜಿಲ್ಲಾಡಳಿತ ದ ಜೊತೆ ಸಹಕರಿಸುವಂತೆ ಅವರು ಮನವಿ ಮಾಡಿದರು. ಕೆಲಸದ ಒತ್ತಡದ ನಡುವೆ ಮನೆಯೊಳಗೆ ಹೆಚ್ಚು ಹೊತ್ತು ಕಳೆಯುವುದು ಮರೆತು ಹೋದಂತಿತ್ತು, ಆದರೆ ಇದೀಗ ಕೊರೋನ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮನೆಯೊಳಗೆ ಇದ್ದು ಪ್ರಧಾನಿ ನರೇಂದ್ರಮೋದಿ ಹೇಳಿದ ರೀತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಗೆ ಅವಕಾಶ ಮಾಡಿಕೊಡಬೇಕಾಗಿದೆ. ಮನೆಯ ಒಳಗೆ ಇರುವಂತಹ ಸಂದರ್ಭದಲ್ಲಿ ಮನಸ್ಸಿಗೆ ಕೆಲಸ ಕೊಡುವಂತಹ ವಿಚಾರಧಾರೆಗಳಲ್ಲಿ ತೊಡಗಿಸಿ, ಮನೆಮಂದಿಯೊಂದಿಗೆ ಸಂತಸದಿಂದ ಕಾಲಕಳೆಯುವಂತೆ ಅವರು ಈ ಸಂದರ್ಭ ಕಿವಿಮಾತು ಹೇಳಿದರು.

More articles

Latest article