ಬಂಟ್ವಾಳ : ಜನಪ್ರತಿನಿಧಿಗಳು ಸರಕಾರದ ಆದೇಶ ಗಳನ್ನು ಪಾಲಿಸಬೇಕು ಇತರರಿಗೆ ಮಾದರಿಯಾಗಬೇಕು ಹಾಗಾದರೆ ಮಾತ್ರ ಜನರ ಸ್ಪಂದನೆ ಮತ್ತು ಅಧಿಕಾರಿಗಳಿಗೆ ಕೆಲಸ ಮಾಡಲು ಸಾದ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದ್ದಾರೆ.
ಜೊತೆಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾತಿಗೆ ಬೆಲೆ ನೀಡಿ ಕೊರೊನೊ ದಿಂದ ಮುಕ್ತಿ ಹೊಂದಲು ದಯಮಾಡಿ ಮನೆಯಿಂದ ಹೊರಬರಬೇಡಿ , ಅಧಿಕಾರಿಗಳಿಗೆ ಕೆಲಸ ನೀಡಬೇಡಿ ಅವರಿಗೂ ಕುಟುಂಬ ಸಂಸಾರವಿದೆ ನಮ್ಮ ವೈಯಕ್ತಿಕ ಜಾಗೃತಿ ಯ ಮೂಲಕ ಸರಕಾರಿ ಅಧಿಕಾರಿಗಳ ಜಾಗೃತಿ ಗಾಗಿ ಸಹಕಾರ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.

ಜನತಾ ಕರ್ಫ್ಯೂನಿಂದಾಗಿ ದೇಶದ ಜನರ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವಂತೆ ನಾನು ಮನೆಯ ವಾತವರಣದಿಂದ ಹೊರಬಂದಿಲ್ಲ ಮನೆಯಲ್ಲಿದ್ದುಕೊಂಡು ದೂರವಾಣಿಯ ಮೂಲಕ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದೇನೆ ನನ್ನ ಕಚೇರಿಯಲ್ಲಿ ಸಹಾಯವಾಣಿ ತೆರೆದಿದ್ದು ಕ್ಷೇತ್ರದ ಜನತೆಯ ಸಂಕಷ್ಟಗಳಿಗೆ ವಾರ್ ರೂಂ ಉತ್ತಮವಾಗಿ ಸ್ಪಂಧಿಸುತ್ತಿದೆ ಪ್ರಜ್ಞಾವಂತ ನಾಗರಿಕರೆ ತಾವೂ ಮನೆಯಲ್ಲೇ ಇದ್ದು ಕೋರೊನಾ ನಿರ್ಮೂಲನೆಗೆ ಶ್ರಮ ತೊಡೋಣ ಕೃಷಿಕನಾದ ನಾನು ಬಿಡುವಿನಲ್ಲಿ ಮನೆಯ ತೋಟದಲ್ಲಿ ಸಾವಯುವ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದೆನೆ..
#StayHome #StaySafe
ಎಂದು ಬಂಟ್ವಾಳ ಶಾಸಕರು ವಿಧಾನ ಸಭಾ ಕ್ಷೇತ್ರದ ಜನತೆಗೆ ಟ್ವಿಟರ್ ಮೂಲಕ ಸಂದೇಶ ಕಲಿಸಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ 340 ಕ್ಕೂ ಆಶಾ ಕಾರ್ಯಕರ್ತೆ ಯರು ದಿನವಿಡಿ ತಮ್ಮ ಆರೋಗ್ಯ ದ ಕಾಳಜಿಯನ್ನು ಬದಿಗೆ ಸರಿಸಿ ಜನರಿಗಾಗಿ ಗ್ರಾಮದ ಪ್ರತಿ ಮನೆ ಮನೆಗಳಿಗೆ ಬೇಟಿ ನೀಡಿ ಜನರು ಹೊರಬರದಂತೆ ಕೊರೊನೊ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆ ಯರ ಪರಿಶ್ರಮ ವನ್ನು ಅಭಿನಂದಿಸುತ್ತೇನೆ ಅವರು ನಮ್ಮ ಕ್ಷೇಮಕ್ಕಾಗಿ ದುಡಿಯುತ್ತಿದ್ದಾರೆ.
ಅಶ್ರಮ ವ್ಯಕ್ತವಾಗದ ರೀತಿಯಲ್ಲಿ ಸಹಕಾರ ನೀಡಿ ಮನೆಯಲ್ಲಿರೋಣ.
ತಾಲೂಕು ಆಡಳಿತದೊಂದಿಗೆ ಸಹಕರಿಸೋಣ.ಕೊರೊನೊ ಹಿಮ್ಮೆಟ್ಟಿಸಲು ಪಣ ತೊಡೋಣ.
ಆರೋಗ್ಯ ವಂತ ನವ ಬಂಟ್ವಾಳ ವನ್ನು ಕಟ್ಟೋಣ.
ಕೆಲವು ಕಡೆ ಅನಾವಶ್ಯಕ ತಿರುಗಾಡುವುದು ಹಾಗೂ ಕರ್ತವ್ಯ ದ ಅಧಿಕಾರಿಗಳಿಗೆ ತೊಂದರೆ ನೀಡುವುದು ಗಮನಕ್ಕೆ ಬಂದಿದ್ದು ಅಂತವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here