ಬಂಟ್ವಾಳ: ಭಾರತ್ ಬಂದ್ ಅಗಿದ್ದು, ಕೆಲಸದ ನಿಮಿತ್ತ ಪರ ಊರಿಗೆ ಹೋದವರು ಅಲ್ಲೇ ಬಾಕಿಯಾಗಿದ್ದಾರೆ. ಬೇರೆ ಊರಿನಿಂದ ಕೆಲಸ ಅರಸಿಕೊಂಡು ಬಂದ ಬೇರೆ ಬೇರೆ ಜಿಲ್ಲೆಯವರು ದ.ಕ.ಜಿಲ್ಲೆಯಲ್ಲಿ ಬಾಕಿಯಾಗಿದ್ದಾರೆ.

ಅವರಿಗೆ ಮಾಡಲು ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲ,
ರೇಷನ್ ಮುಗಿದಿದೆ, ಕೂರಲು ಸ್ಥಳವಿಲ್ಲ ಹಾಗಾಗಿ ತಮ್ಮ ತಮ್ಮ ಊರಿಗೆ ಹೊರಟಿದ್ದಾರೆ.
ಬಸ್ ಇಲ್ಲದ ಕಾರಣ ಹೋಗುವುದು ಹೇಗೆ ಎಂಬ ಚಿಂತನೆಯಲ್ಲಿ ರುವ ಕುಟುಂಬವೊಂದು ನಡೆದುಕೊಂಡು ಹೋಗಲು ಮುಂದಾಗಿದ್ದಾರೆ.
ಕೊಪ್ಪಳ ಮೂಲದ 12 ಮಂದಿ ಕೆಲಸದಾಳುಗಳು ವಾಪಾಸು ಅವರ ಊರಿಗೆ ನಡೆದುಕೊಂಡು ಹೋಗಲು ರೆಡಿಯಾಗಿ ಈಗಾಗಲೇ ಬಿಸಿರೋಡು ಬಿಟ್ಟು ಫರಂಗಿಪೇಟೆ ಮುಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯಿಂದ ಕೆಲಸವನ್ನು ಅರಸಿಕೊಂಡು ಬಿಸಿರೋಡಿಗೆ ಈ ಕುಟುಂಬಗಳು ಬಂದಿತ್ತು.
ಇಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನಸಾಗಿಸುವುದು ಮತ್ತೆ ವಾಪಾಸು ಊರಿಗೆ ಮರಳುವುದು ಮಾಡಿಕೊಂಡು ಇದ್ದರು.
ಕೊರೊನೊ ಭೀತಿಯಿಂದ ಜನತಾಕರ್ಪ್ಯೂ ಅದೇಶ ಮಾಡಿದ ಕೂಡಲೇ ಈ ಎಲ್ಲಾ ಕುಟುಂಬ ಗಳಿಗೆ ಕೆಲಸವಿಲ್ಲದೆ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಅವರು ವಾಪಾಸು ಊರಿಗೆ ಪಾದಸೇವೆಯ ಮೂಲಕ ಹೊರಟಿದ್ದಾರೆ.

ಊಟ ನೀಡಿ ಸಂತೈಸಿ ಕಳುಹಿಸಿದ ಗ್ರಾಮಾಂತರ ಎಸ್.ಐ.ಪ್ರಸನ್ನ

ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರು ರೌಂಡ್ಸ್ ನಲ್ಲಿರುವ ವೇಳೆ ಈ ಕುಟುಂಬ ನಡೆದುಕೊಂಡು ಹೋಗುವುದು ಗಮನಕ್ಕೆ ಬಂದಿತು. ಅವರನ್ನು ತಡೆದು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂತು. ಹಸಿವಿನಲ್ಲಿರುವ ಬಗ್ಗೆ ಅವರು ಎಸ್.ಐ. ಅವರಲ್ಲಿ ಹೇಳಿಕೊಂಡಾಗ ಬ್ರಹ್ಮರಕೋಟ್ಲು ಟೋಲ್ ಗೇಟ್ ಬಳಿ ನಿಲ್ಲಿಸಿ ಅವರಿಗೆ ಬಿಸ್ಕತ್ತು ಗಳನ್ನು ತರಿಸಿಕೊಟ್ಟು ಉಪಚಾರ ಮಾಡಿ ಬಳಿಕ ಪರಂಗಿಪೇಟೆ ತಲುಪುವ ವೇಳೆ ಊಟ ತರಿಸಿಕೊಟ್ಟು ಹೊಟ್ಟೆ ತುಂಬಿಸಿ ಕಳುಹಿಸಿದರು.

ಹಸಿವಿನಿಂದ ನರಳಾಡುತ್ತಿದ್ದ ಕುಟುಂಬ ಕ್ಕೆ ಅನ್ನ ನೀಡಿ ಸಂತೈಸಿ ಊರಿಗೆ ಕಳುಹಿಸಿಕೊಟ್ಟ ಎಸ್.ಐ.ಪ್ರಸನ್ನ ಅವರು ಬಳಿಕ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ.ಆದರೆ ಕೊರೊನೊ ಭೀತಿಯಿಂದ ನಲುಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ವಸತಿ ಕಲ್ಪಿಸುವ ವ್ಯವಸ್ಥೆ ಸಾಧ್ಯ ವಿಲ್ಲ ಅಂದ ಮೇಲೆ ಅವರನ್ನು ಮುಂದೆ ಹೋಗಲು ಅವಕಾಶ ನೀಡಿದರು.

ಹೋಟೆಲ್ ಎಲ್ಲಾ ಬಂದ್ ಅಗಿರುವುದರಿಂದ
ಊಟ ಸಿಗದ ಕಾರ್ಮಿಕರಿಗೆ ಎಸ್.ಐ.ಪ್ರಸನ್ನ ಅವರ ಸೂಚನೆಯಂತೆ ಪರಂಗಿಪೇಟೆ ಸಿಬ್ಬಂದಿಗಳಿಗೆ ತರಿಸಿದ ಊಟವನ್ನು ನೀಡಿದರು.
ಎ.ಎಸ್.ರಮೇಶ್, ಸಿಬ್ಬಂದಿಗಳಾದ ನಜೀರ್ ಸೋಮಶೇಖರ್ ಅವರು ಊಟವನ್ನು ಕಾರ್ಮಿಕರಿಗೆ ನೀಡುತ್ತಿರುವ ಚಿತ್ರ ಇಲ್ಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here