ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದಲ್ಲಿ ಎಳೆಯ ಕಂದಮ್ಮನಿಗೆ ಪ್ರಥಮ ಕೊರೊನೊ ಪ್ರಕರಣ ಪತ್ತೆಯಾಗಿದೆ ಎಂದು ಮಂಗಳೂರು ಜಿಲ್ಲಾಧಿಕಾರಿ ಅಧಿಕೃತ ವಾಗಿ ಘೋಷಣೆ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಲ್ಲಿ 10 ತಿಂಗಳ ಕಂದಮ್ಮನಿಗೆ ಕೊರೊನೊ ಪತ್ತೆ ಎಂಬ ಸುದ್ದಿ
ಜಿಲ್ಲೆಯ ಜನತೆಗೆ ಆತಂಕವನ್ನುಂಟುಮಾಡಿದೆ.
ಮಗುವನ್ನು ಪಕ್ಕದ ಕೇರಳ ರಾಜ್ಯದ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಲಾಗಿತ್ತು ಎಂಬ ಮಾಹಿತಿ ಇದ್ದು ಇನ್ನಷ್ಟೇ ತಿಳಿಯಬೇಕಾಗಿದೆ.

ಈ ಮೂಲಕ ಜಿಲ್ಲೆಯ ಲ್ಲಿ ಒಟ್ಟು ಕೊರೊನೊ ಪ್ರಕರಣಗಳ ಸಂಖ್ಯೆ ಆರಕ್ಕೇರಿತು.
ಈವರಗೆ ಹೊರಗಿನಿಂದ ವ್ಯಕ್ತಿಗಳಿಗೆ ಮಾತ್ರ ಸೊಂಕು ತಗಲಿತ್ತು ಸಾಮುದಾಯಿಕ ವಾಗಿಲ್ಲ ಎಂಬ ವಿಶ್ವಾಸದ ಮೂಲಕ ಜನ ಬೇಕಾಬಿಟ್ಟಿ ತಿರುಗಾಡ ನಡೆಸುತ್ತಿದ್ದರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆತಿದ್ದರು.
ಇನ್ನು ಮುಂದೆ ಹಾಗಾಗಲ್ಲ ಅಧಿಕಾರಿಗಳು ಹೆಚ್ಚಿನ ಕ್ರಮಕೈಗೊಳ್ಳುವ ಸಾಧ್ಯತೆ ಗಳಿವೆ.

ಸಜೀಪ ನಡು ಗ್ರಾಮದ ಲಕ್ಷಣ ಕಟ್ಟೆ ಎಂಬಲ್ಲಿ ನ 10 ತಿಂಗಳ ಪುಟ್ಟ ಮಗುವಿನಲ್ಲಿ ಕೊರೊನೊ ಪ್ರಕರಣ ಪತ್ತೆಯಾಗಿದ್ದು ಇಲ್ಲಿನ ಸುತ್ತಮುತ್ತ ಸಾಕಷ್ಟು ಬಿಗಿ ಭದ್ರತೆ ಯನ್ನು ಮಾಡಲಾಗಿದೆ.
ಈವರೆಗೆ ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ಮಾತ್ರ ಕೊರೊನೊ ಪ್ರಕರಣ ಪತ್ತೆಯಾಗಿತ್ತು, ಆದರೆ ಪ್ರಸ್ತುತ ಸಜೀಪದ ಗ್ರಾಮೀಣ ಪ್ರದೇಶದ ಮಗುವಿನಲ್ಲಿ ಕೊರೊನೊ ಪತ್ತೆಯಾದ ಪ್ರಥಮ ಪ್ರಕರಣವಾಗಿದ್ದು ಜಿಲ್ಲೆಯ ಹಾಗೂ ತಾಲೂಕಿನ ಜನರನ್ನು ಭಯಭೀತರನ್ನಾಗಿಸಿದೆ.
ಈ ಪ್ರದೇಶದ ಸುತ್ತಮುತ್ತಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇವರ ಮನೆಗೂ ಯಾರು ಹೋಗದಂತೆ ಈಗಾಗಲೇ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ನೇತ್ರತ್ವದಲ್ಲಿ ನಾಕಾ ಬಂದಿ ಮಾಡಲಾಗಿದೆ.
ಈ ಗ್ರಾಮಕ್ಕೆ ಬರುವಂತಿಲ್ಲ ಹಾಗೂ ಹೊರಗೆ ಹೋಗದಂತೆ ಪೋಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ.
ಅಲ್ಲಿನ ಸ್ಥಳೀಯ ನಿವಾಸಿಗಳಿಗೂ ಎಚ್ಚರಿಕೆ ನೀಡಲಾಗಿದೆ.
ಗುರುವಾರ ಸಂಜೆಯ ವೇಳೆಗೆ ಈ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಜಿಲ್ಲಾಧಿಕಾರಿ ಆದೇಶಕ್ಕೆ ಜನರು ಕಾದುಕುಳಿತ್ತಿದ್ದರು.

ಈ ನಡುವೆ ಸಜೀಪನಡು ವಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಸುಳ್ಳು ಮಾಹಿತಿ ಎಂದು ಬರೆದು ಅದು ಸಾಮಾಜಿಕ ‌ಜಾಲತಾಣದಲ್ಲಿ ಹರಿದಾಡುತ್ತಿತ್ತು.ಒಟ್ಟಿನಲ್ಲಿ ಇಲ್ಲಿನ ಜನರನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here