


ಬಂಟ್ವಾಳ: ಮಂಗಳೂರಿನಲ್ಲಿರುವ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯಾಗಿ ಮಾರ್ಪಾಟು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ವೆನ್ಲಾಕ್ ಆಸ್ಪತ್ರೆಗಳ 250 ಬೆಡ್ ಗಳನ್ನು ಪೋಸಿಟಿವ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. 20 ಹಾಸಿಗೆಗಳನ್ನು ಶಂಕಿತ ರೋಗಿಗಳಿಗೆ ಮೀಸಲಿಟ್ಟಿದೆ. ಹಾಗೆಯೇ ಖಾಸಗಿ ಆಸ್ಪತ್ರೆಯಲ್ಲಿರುವ ಕೊರೊನಾ ಶಂಕಿತನ್ನೂ ವೆನ್ಲಾಕ್ ಗೆ ದಾಖಲು ಮಾಡಲಾಗಿದೆ. ಇನ್ನುಳಿದಂತೆ ಈಗಾಗಲೇ ವೆನ್ಲಾಕ್ ನಲ್ಲಿ ದಾಖಲಾಗಿರುವ ಇತರ 218 ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಹೊರರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು. ಇನ್ನು ಪ್ರತೀ ಮೆಡಿಕಲ್ ಕಾಲೇಜಿನಲ್ಲಿ 20 ಹಾಸಿಗೆಗಳ ಐಸೋಲೇಷನ್ ವಾರ್ಡ್ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರಗೆ ಒಟ್ಟು 5 ಪಾಸಿಟಿವ್ ಪ್ರಕರಣ ಕಂಡು ಬಂದಿದೆ.
೪ ಮಂದಿ ಕಾಸರಗೋಡು ಮೂಲದವರು, ಉಳಿದಂತೆ
ಒಬ್ಬ ರೋಗಿ ಭಟ್ಕಳ ಮೂಲದವರಾಗಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ದ.ಕ ಜಿಲ್ಲೆಯಲ್ಲಿ ಇನ್ನೂ 140 ಕೊರೊನಾ ಶಂಕಿತರಿದ್ದಾರೆ ಹಾಗಾಗಿ ಬಹಳ ಎಚ್ಚರಿಕೆ ಅಗತ್ಯವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಅವರು ಸಾರ್ವಜನಿಕ ರಿಗೆ ಮನವಿ ಮಾಡಿದರು.
ಇನ್ನು ಕೂಡಾ
17 ಮಂದಿಯ ರಿಪೋರ್ಟ್ ಬರಲು ಬಾಕಿಯಿದೆ ಅದರ ಮೆಡಿಕಲ್ ರಿಪೋರ್ಟ್ ಬಂದ ಬಳಿಕ ಮಾಹಿತಿ ನೀಡುವ ಬಗ್ಗೆ ಯೂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತಿತರರು ಉಪಸ್ಥಿತರಿದ್ದರು.





