

ಬಂಟ್ವಾಳ: ಕೊರೊನೊ ಮುಂಜಾಗೃತಿಗಾಗಿ ಜಿಲ್ಲಾಡಳಿತದ ಅದೇಶದಂತೆ ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತ್ರತ್ವದಲ್ಲಿ ಬಂಟ್ವಾಳ ವೃತ್ತ ದ ಪೋಲೀಸರು ಜಂಟಿಯಾಗಿ ಅಂಗಡಿಗಳನ್ನು ಬಂದ್ ಮಾಡುವಂತೆ ಧ್ವನಿವರ್ಧಕ ದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.
ಮಾ.31 ರ ವರೆಗೆ ಯಾರು ಮನೆಯಿಂದ ಹೊರಬಾರದು ಎಂಬ ಕಟ್ಟು ನಿಟ್ಟಿನ ಆದೇಶ ಮಾಡಿದರ ಜೊತೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು
ಬಂಟ್ವಾಳ, ಬಿಸಿರೋಡು , ಪರಂಗಿಪೇಟೆ, ಕೈಕಂಬ, ವಿಟ್ಲ, ಕಲ್ಲಡ್ಕ ಸೇರಿದಂತೆ ಎಲ್ಲಾ ಪೇಟೆ ಗಳನ್ನು ಸಂಪೂರ್ಣ ಬಂದ್ ಮಾಡಲು ಅವರು ಧ್ವನಿ ವರ್ಧಕ ಬಳಸಿದ್ದಾರೆ.
ಬಂದ್ ಮಾಡದ ಅಂಗಡಿ ಮಾಲಕರಿಗೆ ಹಾಗೂ ರಸ್ತೆಯಲ್ಲಿ ರುವ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ತಹಶೀಲ್ದಾರ್ ಅವರು ಧ್ವನಿವರ್ಧಕದ ಮೂಲಕ ನೀಡಿದ್ದಾರೆ.
ಬಂಟ್ವಾಳ ವೃತ್ತದ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ನಗರ ಠಾಣಾ ಎಸ್. ಐ.ಅವಿನಾಶ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್, ವಿಟ್ಲ ಠಾಣಾ ಎಸ್. ಐ.ವಿನೋದ್, ಪುಂಜಾಲಕಟ್ಟೆ ಎಸ್. ಐ.ಸೌಮ್ಯ ಅವರು ಸೇರಿದಂತೆ ಪೋಲೀಸರು ತಹಶೀಲ್ದಾರ್ ಅವರ ಜೊತೆಯಲ್ಲಿ ಅಂಗಡಿಗಳನ್ನು ಬಂದ್ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.








