ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ವಿರುದ್ಧದ ಸಾಮೂಹಿಕ ಹೋರಾಟಕ್ಕೆ ಸ್ವಯಂ ಜಾಗೃತಿಯೇ ಶಕ್ತಿ. ಕೊರೋನಾ ನಿಯಂತ್ರಣ ಸರ್ಕಾರದ ಜವಬ್ದಾರಿ, ಆರೋಗ್ಯ ಇಲಾಖೆಯ ಜವಬ್ದಾರಿ ಎಂದು ನಿರ್ಲಕ್ಷ್ಯ ತೋರದೇ, ಎಲ್ಲರ‌ ಕೈ ಮೀರುತ್ತಿರುವ ಈ ಹಂತದಲ್ಲಿ ಈ ಮಹಾಮಾರಿಯ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯವಿದೆ ಎಂಬುದನ್ನು ಮರೆಯಬಾರದು. ರಾಜ್ಯದ ಕರಾವಳಿಯನ್ನೂ ಬಿಡದೆ ದಿನದಿಂದ‌ದಿನಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕೊರೋನಾದ ನಿಯಂತ್ರಣಕ್ಕೆ ‌ಭಾನುವಾರದ ಜನತಾ ಕರ್ಫ್ಯೂ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಆದರೆ ಈ ಕಾಯಿಲೆ ಸಂಪೂರ್ಣ ತೊಲಗುವವರೆಗೂ ಪ್ರತಿಯೊಬ್ಬರೂ ಸ್ವಯಂ ಕರ್ಫ್ಯೂ‌ ವಿಧಿಸಿಕೊಳ್ಳುವ ಮನಸು ಮಾಡಬೇಕು. ಎಸ್ಸೆಸ್ಸೆಲ್ಸಿ ಸಹಿತ ಬಹುತೇಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ, ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ಮಾರ್ಪಾಡು, ನಿಷೇಧವಿದೆ, ತುರ್ತು ಕಾರ್ಯ ಹೊರತು ಪಡಿಸಿದರೆ ಉಳಿದೆಲ್ಲಾ ಸೇವೆಗಳನ್ನು ಸರ್ಕಾರಿ ಕಚೇರಿಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಹೀಗೆ ಸರ್ಕಾರ, ಜಿಲ್ಲಾಡಳಿತ ವಿಧಿಸುವ ವಿವಿಧ ನಿರ್ದೇಶನ, ನಿರ್ಬಂಧದ ಹಿಂದೆ ಪ್ರತಿಯೊಬ್ಬರ ಕಾಳಜಿ ಇದೆ ಎನ್ನುವುದನ್ನು ಮರೆಯಬಾರದು. ಮೊದಲು ನಾವು ಕೊರೋನ ಹಾವಳಿಯಿಂದ ತಪ್ಪಿಸಿಕೊಳ್ಳೋಣ. ಆ ಮೂಲಕ ನಮ್ಮ ಮನೆ, ನಮ್ಮಗ್ರಾಮ, ನಮ್ಮ ತಾಲೂಕು, ನಮ್ಮಜಿಲ್ಲೆ , ನಮ್ಮ ರಾಜ್ಯ, ನಮ್ಮ ದೇಶ ಹೀಗೆ ಇಡೀ ವಿಶ್ವವನ್ನೇ ಕೊರೋನಾ ಮುಕ್ತರಾಗಿಸೋಣ.

ಮಾಧ್ಯಮಗಳ ವರದಿ ಅತಿರಂಜನೀಯ, ಇಡೀ ಸಮಾಜವನ್ನೇ ಭಯಭೀತರನ್ನಾಗಿಸುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಆದರೆ ಇಂದಿನ ವ್ಯಾವಹಾರಿಕ ಕ್ಷೇತ್ರದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸರ್ಕಾರ, ಆರೋಗ್ಯ ಇಲಾಖೆಯನ್ನು ಎಚ್ಚರಿಸುವ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮಗಳು ನಡೆಸುತ್ತಾ ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ನಡೆಸುತ್ತಿರುವ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕುವುದರಿ‌ಂದ ತೊಡಗಿ, ಕೊರೋನಾ‌ ನಿಯಂತ್ರಣಕ್ಕೆ ವಹಿಸಿಕೊಳ್ಳಬೇಕಾದ ಜಾಗೃತಿಯನ್ನೂ ಮಾಧ್ಯಮ ಸ್ವಯಂ ಜವಬ್ದಾರಿಯಿಂದ ಮಾಡಿದೆ ಎಂದು 

  

ಪ್ರಶಾಂತ್ ಪುಂಜಾಲಕಟ್ಟೆ

        ಸಂಪಾದಕ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here