ಬಂಟ್ವಾಳ:ಮುಂಜಾನೆಯಿಂದಲೇ ಸದಾ ಬ್ಯೂಸಿ ನಗರವಾಗಿ ಜನರಿಂದ ತುಂಬಿತುಳುಕುತ್ತಿದ್ದ ಬಂಟ್ವಾಳ ಕೊರೊನೊ ವೈರಸ್ ನ ಮುಂಜಾಗ್ರತೆಗಾಗಿ ಇಂದು ಸೋಮವಾರ ಕೂಡಾ ಮೌನವಾಗಿದೆ.


ಮಂಗಳೂರಿನಲ್ಲಿ ಆದಿತ್ಯವಾರ ಒಂದು ಕೊರೊನೊ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿಂದೂ ರೂಪೇಶ್ ತಿಳಿಸಿದ ಬಳಿಕ ಜಿಲ್ಲೆಯ ಜನರು ಸ್ವಯಂ ಜಾಗೃತ ರಾಗಲು ಮುಂದಾಗಿದ್ದಾರೆ.
ಸರಕಾರ ಹಾಗೂ ಜಿಲ್ಲಾಡಳಿತ ಮಾ.31 ರವರೆಗೆ ಅಗತ್ಯ ವಸ್ತಗಳ ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿ , ತೀರಾ ಅವಶ್ಯ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ ಎಂದು ತಿಳಿಸದರ ಅಂಗವಾಗಿ ಬಿಸಿರೋಡು ಇಂದು ಕೂಡಾ ಬಂದ್ ಅಗಿದೆ.
ಸರಕಾರಿ , ಖಾಸಗಿ ಬಸ್ ಗಳ ಸಹಿತ ಯಾವುದೇ ಬಾಡಿಗೆ ವಾಹನಗಳು ರಸ್ತೆಗೆ ಇಳಿಯಲಿಲ್ಲ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here