


ಬಂಟ್ವಾಳ, : ಕೊರೊನಾ ವೈರಸ್ಸನ್ನು ಮಣಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟಿರುವ ಜನತಾ ಕರ್ಫ್ಯೂಗೆ ಎಲ್ಲಡೆಯೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಜತೆಗೆ ಖಾಯಿಲೆಯನ್ನು ದೂರ ಮಾಡಲು ಶ್ರಮಿಸುತ್ತಿರುವವರಿಗಾಗಿ ಸಂಜೆ ೫ ಗಂಟೆಗೆ ಮನೆಯ ಹೊರಗೆ ಬಂದು ಚಪ್ಪಾಳೆ ತಟ್ಟುವಂತೆ ಹೇಳಿದ್ದು, ಅದನ್ನೂ ಜನತೆ ಬೆಂಬಲಿಸಿದ್ದಾರೆ.
ಭಾನುವಾರ ಮನೆ ಮಂದಿಯ ಜತೆ ಬೆರೆತವರ ಸಂಜೆ ೫ ಗಂಟೆಯಾಗುತ್ತಿದ್ದಂತೆ ಕೊರೊನಾ ವೈರಸ್ಸನ್ನು ದೂರ ಮಾಡಲು ಶ್ರಮಿಸುತ್ತಿರುವ ವೈದ್ಯರು, ನರ್ಸ್ಗಳು, ಇತರ ಅಽಕಾರಿಗಳಾಗಿ ಚಪ್ಪಾಳೆ ತಟ್ಟಿದರು.
ನಗರ ಹಾಗೂ ಗ್ರಾಮೀಣ ಪ್ರದೇಶ ಹೀಗೆ ಎಲ್ಲಾ ಭಾಗಗಳಲ್ಲೂ ಜನತೆ ಚಪ್ಪಾಳೆ ತಟ್ಟುವ ಪ್ರಕ್ರಿಯೆ ನಡೆಸಿದ್ದು, ಕೆಲವೊಂದೆಡೆ ನೆರೆಕರೆಯವರು ಸೇರಿ ಚಪ್ಪಾಳೆ ತಟ್ಟಿದರು. ಇನ್ನು ಕೆಲವೆಡೆ ಸ್ನೇಹಿತರು ಸೇರಿ ಚಪ್ಪಾಳೆ ತಟ್ಟುವ ದೃಶ್ಯಗಳು ಕಂಡುುಬಂತು. ಒಟ್ಟಿನಲ್ಲಿ ಪ್ರಧಾನಿಯ ಕರೆಗೆ ಜನತೆಯ ಬೆಂಬಲ ವಿಶೇಷವಾಗಿತ್ತು.





