



ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ನೀಡಿದ ಮಾಹಿತಿ ಪ್ರಕಾರ 163 ಮಂದಿ ಭಾರತೀಯರು ಹಾಗೂ 32 ಮಂದಿ ವಿದೇಶಿಯರಿದ್ದಾರೆ.
ಇಲಾಖೆ ನೀಡಿದ ಮಾಹಿತಿ ಪ್ರಕಾರ 20 ಮಂದಿ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಹಾಗೂ ನಾಲ್ವರು ಮೃತಪಟ್ಟಿದ್ದಾರೆ.
ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡಿರುವ ಈ ಕೊರೊನಾ ವೈರಸ್ 100ಕ್ಕಿಂತಲೂ ಹೆಚ್ಚು ದೇಶವನ್ನು ಆವರಿಸಿಕೊಂಡಿದೆ. 6 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ.
ದೇಶದಲ್ಲಿ ವಿವಿಧ ರಾಜ್ಯಗಳಿಗೆ ಆವರಿಸಿದ ಮಾರಕ ಸೋಂಕು ಆಂಧ್ರಪ್ರದೇಶ-2, ಚಂಡೀಗಢ-1, 16 ಪ್ರಕರಣಗಳು,1 ವಿದೇಶಿ, ಮೂವರು ಡಿಸ್ಚಾರ್ಜ್, 1 ಸಾವು, ಗುಜರಾತ್-2, ಹರ್ಯಾಣದಲ್ಲಿ-14 ವಿದೇಶಿಯರು, ಕರ್ನಾಟಕದಲ್ಲಿ-15 ಪ್ರಕರಣ, 1 ಸಾವು, ಕೇರಳ-26 ಪ್ರಕರಣ-1 ವಿದೇಶಿ, 1 ಡಿಸ್ಚಾರ್ಜ್, ಮಹಾರಾಷ್ಟ್ರ 44 ಪ್ರಕರಣ 1 ಸಾವು, ಒಡಿಶಾ-1 ಪ್ರಕರಣ, ಪುಚುಚೆರಿ-1, ಪಂಜಾಬ್ -2, 1 ಸಾವು, ರಾಜಸ್ಥಾನ-6, ತಮಿಳುನಾಡು-3, ತೆಲಂಗಾಣ-7, ಚಂಡೀಗಢ ಕೇಂದ್ರಾಡಳಿತ ಪ್ರದೇಶ-1, ಲಡಾಖ್-10, ಉತ್ತರ ಪ್ರದೇಶ 18, ಉತ್ತರಾಖಂಡ್-1, ಪಶ್ಚಿಮ ಬಂಗಾಳ-1 ಎಂಬ ಮಾಹಿತಿ ಸಿಕ್ಕಿದೆ.





