ಬಂಟ್ವಾಳ: ಕೊರೊನಾ ವೈರಸ್ ತಡೆಯುವುದು ಹಾಗೂ ಅವರ ಮುನ್ನೆಚ್ಚರಿಕೆ ಕುರಿತು ಎಲ್ಲಾ ಕಡೆಯೂ ವ್ಯಾಪಕ ಕಾರ್ಯಾಚರಣೆ ನಡೆಯುತ್ತಿದ್ದು, ಬಂಟ್ವಾಳದಲ್ಲಿಯೂ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಕೊರೊನಾ ಮಣಿಸಲು ಹೆಚ್ಚಿನ ನಿಗಾ ವಹಿಸಿದೆ.


ತಹಶೀಲ್ದಾರ್ ರಶ್ಮಿ ಎಸ್.ಆರ್. ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಅವರು ತಾಲೂಕಿನ ಪ್ರತಿ ಸಮುದಾಯ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶುಕ್ರವಾರ ತಹಶೀಲ್ದಾರ್ ಅವರ ನಿಯೋಗ ಪುಂಜಾಲಕಟ್ಟೆ ಸಮುದಾಯ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದೆ.

ಪ್ರತಿ ಕಡೆಗೆ ಭೇಟಿ ನೀಡಿ ನಿಗದಿತ ಆಸ್ಪತ್ರೆಗಳಲ್ಲಿ ಸಜ್ಜುಗೊಳಿಸಲಾದ ಐಸೋಲೇಟೆಡ್ ವಾರ್ಡ್, ಇತರ ಆರೋಗ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸುತ್ತಿದೆ. ಜತೆಗೆ ಅಲ್ಲಿನ ವೈದ್ಯಾಧಿಕಾರಿಗಳನ್ನು ಭೇಟಿ ನೀಡಿ ಅವರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here