


ವಿಟ್ಲ: 2018-19ನೇ ಸಾಲಿನ ಭರತನಾಟ್ಯ ಜ್ಯಾನಿಯರ್ ಪರೀಕ್ಷೆಯಲ್ಲಿ ಶೇ.93.25 ಅಂಕ ಗಳಿಸಿ ಉನ್ನತ ಸ್ಥಾನದಲ್ಲಿ ತೇರ್ಗಡೆಯಾದ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ ಮೇಧಾ ನಾಯಕ್ ಅವರಿಗೆ ವಿಟ್ಲ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಉಪನ್ಯಾಸ ಪ್ರಕಾಶ್ ನಾಯಕ್ -ಮೋಹಿನಿ ಪಾಟ್ಕರ್ ದಂಪತಿಗಳ ಪುತ್ರಿಯಾಗಿರುವ ಈಕೆ ಒಡಿಯೂರು ಸಾತ್ವಿಕ ತೇಜ ಕಲಾಕೇಂದ್ರದ ನೃತ್ಯ ನಿರ್ದೇಶಕಿ ಉಷಾ ಸುಬ್ರಹ್ಮಣ್ಯ ಶೆಟ್ಟಿ ಒಡಿಯೂರು ಅವರ ಶಿಷ್ಯೆಯಾಗಿದ್ದಾರೆ.





