Thursday, October 26, 2023

ಕೊರೊನಾ ವೈರಸ್ ಬಗ್ಗೆ ಭಯ ಹುಟ್ಟಿಸದೆ ಜಾಗೃತಿ ಮೂಡಿಸಿ: ಇ.ಒ.ರಾಜಣ್ಣ

Must read

ಬಂಟ್ವಾಳ: ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಡಿಯಲ್ಲಿ ತಾಲೂಕು ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನಲ್ಲಿರುವ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕೊರೊನಾ ವೈರಸ್ ಮುನ್ನೆಚ್ಚರಿಕೆಯಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿಗಳು ಸೇರಿದಂತೆ ಎಲ್ಲಾ ರೀತಿಯ ಕಾಲನಿಗಳ ಮೇಲೆ ಹೆಚ್ಚಿನ ನಿಗಾ ಇರಿಸಿ, ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಬಂಟ್ವಾಳ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇಒ ಸೂಚಿಸಿದರು.


ಕೊರೊನಾ ವೈರಸ್ ಬಗ್ಗೆ ಭಯವನ್ನು ಹುಟ್ಟಿಸದೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಹೀಗಾಗಿ ಕಾಲನಿಗಳಲ್ಲಿ ಸ್ವಚ್ಛತೆ ಅಗತ್ಯವಾಗಿದೆ ಎಂದರು. ಸಭೆಯಲ್ಲಿ ಎಸ್‌ಟಿ/ಎಸ್‌ಟಿಗಳಿಗೆ ಮೀಸಲಿಟ್ಟ ಪ್ರತಿ ಇಲಾಖೆಗಳ ಅನುದಾನಗಳ ಕುರಿತು ಅಽಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 12 ಪ.ಪಂ. ಹಾಗೂ 6 ಪ.ಜಾ. ಸ್ತ್ರೀ ಶಕ್ತಿ ಗುಂಪುಗಳನ್ನು ರಚನೆ ಮಾಡುವಂತೆ ಗುರಿ ನಿಗದಿ ಪಡಿಸಲಾಗಿದ್ದು, ಅದನ್ನು ರಚನೆ ಮಾಡಿ ಅವರಿಗೆ 5000 ರೂ.ಗಳ ಸುತ್ತು ನಿಧಿಯನ್ನು ನೀಡಲಾಗಿದೆ ಎಂದು ಸಿಡಿಪಿಓ ಗಾಯತ್ರಿ ಕಂಬಳಿ ತಿಳಿಸಿದರು.


ಪ್ರತಿ ಇಲಾಖೆಯಲ್ಲಿ ಕೊರೊನಾ ವೈರಸ್ ಕುರಿತು ಪ್ರತಿ ಇಲಾಖೆಯಲ್ಲಿ ಜಾಗೃತಿ ಪತ್ರಗಳನ್ನು ಅಳವಡಿಸಬೇಕು. ಜತೆಗೆ ತಮ್ಮ ಸಿಬಂದಿಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ತಾಲೂಕಿನ ಗಡಿ ಪ್ರದೇಶವು ಕೇರಳ ರಾಜ್ಯದೊಂದಿಗೆ ಹಂಚಿಕೊಂಡಿರುವ ಗಡಿ ಪ್ರದೇಶದಲ್ಲಿ ಹೊರಭಾಗದಿಂದ ಆಗಮಿಸುವವರ ಕುರಿತು ನಿಗಾ ಇಟ್ಟು, ಯಾವುದೇ ಮಾಹಿತಿ ಲಭ್ಯವಾದರೆ ತಮ್ಮ ಅಥವಾ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ತಹಶೀಲ್ದಾರ್ ರಶ್ಮಿ ಎಸ್.ಆರ್.ಮಾಹಿತಿ ನೀಡಿದರು.
ಗ್ರಾ.ಪಂ.ಗಳಲ್ಲಿ ವಯಸ್ಕರ ಶಿಕ್ಷಣಕ್ಕೆ 25 ಸಾವಿರ ರೂ.ಮೀಸಲಿಡಲಾಗುತ್ತಿದ್ದು, ಅದರ ಪ್ರಗತಿಯ ಕುರಿತು ಇಒ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ವಿಚಾರಿಸಿದಾಗ, ಅದಕ್ಕಾಗಿಯೇ ವಯಸ್ಕರ ಶಿಕ್ಷಣದ ಪ್ರೇರಕರು ಇರುತ್ತಾರೆ. ಅವರು ಅದನ್ನು ನೋಡಿಕೊಳ್ಳುತ್ತಾರೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಅವರು ಸ್ವಾಗತಿಸಿ, ವಂದಿಸಿದರು.

More articles

Latest article