ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರವು ಇ-ಆಡಳಿತ ವ್ಯವಸ್ಥೆಯಂತೆ ಕಾಗದ ರಹಿತ ಆಡಳಿತ ಜಾರಿಗೊಳಿಸಲು ಮುಂದಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಕ್ರಮವನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಬಂಟ್ವಾಳ ಪುರಸಭೆಯಲ್ಲಿ ಕಟ್ಟಡ ಪರವಾನಿಗೆ ಪ್ರಕ್ರಿಯೆಯನ್ನು ಇ-ಆಡಳಿತ ವ್ಯವಸ್ಥೆಯಂತೆ ನಿರ್ಮಾಣ-2ರಲ್ಲಿ ಮಾಡಲು ಎಲ್ಲಾ ನೊಂದಾಯಿತ ವಾಸ್ತುಶಿಲ್ಪಿ/ಅಭಿಯಂತರರುಗಳಿಗೆ ಸಂಬಂಧಪಟ್ಟ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, ಅದರಂತೆ ಬಂಟ್ವಾಳ ಪುರಸಭೆಯ ನೊಂದಾಯಿತ ಇಂಜಿನಿಯರ್ ಸತೀಶ್ ಕುಲಾಲ್ ಇವರ ತಂತ್ರಾಂಶದ ಮೂಲಕ ಬಿಮೂಡ ಗ್ರಾಮದ ಸ. ನಂ. 295-3ಎ ರಲ್ಲಿ ಮಹೇಶ್ ಭಟ್ ಅಗ್ರಬೈಲು ಬಿಮೂಡ ಇವರಿಗೆ ಪ್ರಥಮವಾಗಿ ಇ-ಆಡಳಿತ ವ್ಯವಸ್ಥೆಯಂತೆ ಕಟ್ಟಡ ಪರವಾನಿಗೆಯನ್ನು ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮತ್ತು ಕಿರಿಯ ಅಭಿಯಂತರರಾದ ಡೊಮಿನಿಕ್ ಡಿಮೆಲ್ಲೋ ಸಂಬಂಧಪಟ್ಟ ಸಿಬ್ಬಂದಿಗಳ ಮುಖಾಂತರ ಮಾ.12 ದಿನಾಂಕ ರಂದು ಹಸ್ತಾಂತರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here