



ಬಂಟ್ವಾಳ: ಕರ್ನಾಟಕ ರಾಜ್ಯದಲ್ಲಿರುವ ಕುಲಾಲ /ಕುಂಬಾರ ಸಮುದಾಯಕ್ಕೆ ರಾಜ್ಯ ಸರಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಸರಕಾರವನ್ನು ಒತ್ತಾಯಿಸುವಂತೆ ಕುಲಾಲ ಸಮುದಾಯದ ವತಿಯಿಂದ ಕಲ್ಲಡ್ಕ ಡಾ! ಪಗರಭಾಕರ ಭಟ್ ಅವರಿಗೆ ಮನವಿ ನೀಡಲಾಯಿತು.
ರಾಜ್ಯದಲ್ಲಿ ಅಂದಾಜು ಸುಮಾರು 25 ಲಕ್ಷಕ್ಕಿಂತಲೂ ಹೆಚ್ಚು ಕುಂಬಾರ ಜನಸಂಖ್ಯೆ ಇದ್ದು ಈ ತನಕ ರಾಜ್ಯ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡದಿರುವ ಬಗ್ಗೆ ದ.ಕ ಜಿಲ್ಲಾ ಕುಲಾಲ /ಕುಂಬಾರ ಪ್ರಮುಖರು ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರಿಗೆ ಮನವಿ ನೀಡಿದರು.
ಈ ಸಂದರ್ಭ ವಿಷಯದ ಸತ್ಯತೆಯನ್ನು ಮನವರಿಕೆ ಮಾಡಿ, ಇಗಾಗಲೇ ಹಲವು ಬಾರಿ ಮಂತ್ರಿಗಳಿಗೆ, ರಾಜ್ಯ ಅಧ್ಯಕ್ಷರಿಗೆ ಜಿಲ್ಲೆಯ ಹಾಗು ರಾಜ್ಯದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದನ್ನ ತಿಳಿಸಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂಬ ವಿಚಾರವನ್ನು ಅವರಿಗೆ ತಿಳಿಸಲಾಯಿತು.
ಡಾ. ಪ್ರಭಾಕರ ಭಟ್ ಮನವಿಗೆ ಪೂರಕವಾಗಿ ಸ್ಪಂದಿಸಿ ಪ್ರಾಮಾಣಿಕ ಸಜ್ಜನ ಸಮುದಾಯವಾದ ಕುಂಬಾರ ಸಮುದಾಯಕ್ಕೆ ಈಗಾಗಲೇ ಪ್ರಾತಿನಿಧ್ಯ ಸಿಗಬೇಕಾಗಿತ್ತು,ಅದು ಸಿಗದಿರುವುದು ನಿಜವಾಗಿಯೂ ಸಮಾಜಕ್ಕೆ ಆದ ಅನ್ಯಾಯ. ಮುಂದೆ ಜನಾಂಗದ ಪ್ರಮುಖರಿಗೆ ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ನನ್ನಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ನಿಯೋಗಕ್ಕೆ ಭರವಸೆ ನೀಡಿದರು.
ಈ ನಿಯೋಗದಲ್ಲಿ ಪ್ರಮುಖರಾದ ಸುಕುಮಾರ್ ಬಂಟ್ವಾಳ್, ನಾರಾಯಣ ಸಿ. ಪೆರ್ನೆ, ಪದ್ಮಕುಮಾರ್ ಹಾಗೂ ಹರೀಶ್ ಕಾರಿಂಜ ಬೆಳ್ತಂಗಡಿ, ಸುಜೀರ್ ಕುಡುಪು, ಮಹಾಬಲ ಮಾಸ್ಟರ್, ಸುಧಾಕರ್ ಸುರತ್ಕಲ್, ಶೇಷಪ್ಪ ಮಾಸ್ಟರ್, ಲಕ್ಷ್ಮಣ್ಅಗ್ರಬೈಲ್ ಹರಿಪ್ರಸಾದ್ ಭಂಡಾರಿಬೆಟ್ಟು, ಲೋಹಿತ್ ಪಣೋಲಿಬೈಲ್ ಮೊದಲಾದ ಪ್ರಮುಖರಿದ್ದರು.





