


ಹೃದಯ ನಿಂತರಲ್ಲವೇ
ಸಾವು..
ನಿಲ್ಲದ ಹೃದಯ
ದೇಹದಲ್ಲಿದ್ದರೆ..!
ಹೀಗೊಂದು ಪ್ರಯೋಗ ನಡೆದೇ ಹೋಯ್ತು..,
ಯಶಸ್ವಿ ಆದದ್ದೇ ತಡ ಕೃತಕ ಜೋಡಣೆ ಶುರು..!?
ಇದ್ದೆಲ್ಲಾ ತಂತ್ರಜ್ಞಾನ
ಉಪಯೋಗಿಸಿ ಮಾಡಿದ ಹೃದಯವದು..
ನಿಲ್ಲುವ ಭಯವಿಲ್ಲ..
ಕೆಟ್ಟರೆ ಶೀಘ್ರ ರಿಪೇರಿ ಸಾಧ್ಯ..
ಹಾರ್ಟ್ ಅಟ್ಯಾಕ್ ಆಗುವ ಚಾನ್ಸೇ ಇಲ್ಲ..
ದೇಹವನ್ನು ಸಜೀವ ಹೂತರೂ ಅಷ್ಟೇ,
ದಹಿಸಿದರು ಅಷ್ಟೇ
ಹೃದಯ ನಿಲ್ಲದು..!
ಹೃದಯ ಎಕ್ಸ್ಚೇಂಜ್ ಸೌಲಭ್ಯ ಇದೆ..
“ಹಳೇ ಹೃದಯ ಸಾಕಾಯಿತೇ
ಬದಲಾಯಿಸಿ ಇಂದೇ ಹೊಸ “ಸ್ಟೀಲ್” ಹೃದಯಕ್ಕೆ.. ”
ಹೀಗೊಂದು ಜಾಹಿರಾತು
ಟಿವಿಯಲ್ಲಿ ಸಾಮಾನ್ಯ..!
ಕಾಸಿದ್ದರೆ ಸಾಕು ಯಾರು ಬೇಕಾದರೂ ಖರೀದಿಸಬಹುದು..!
ಈಗ ಉಸಿರುಗಟ್ಟಿ ಸಾಯಲಾಗದು,ಸಾಯಿಸಲಾಗದು..
ಏಕೆಂದರೆ ಈ ಹೃದಯಕ್ಕೆ ಉಸಿರಿನ ಆಗತ್ಯವೇ ಇಲ್ಲ.
ಅದು ಬಡಿಯುತ್ತಲೇ ಇರುತ್ತೆ..
ತಲೆಗೆ ಗುಂಡು ಹೊಡೆದು ಸತ್ತರು..,
ತಲೆನೇ ಕತ್ತರಿಸಿ ತೆಗೆದರು,
ದೇಹವೇ ಚೂರಾಗಿ ಹೋದರು..
ಹೃದಯ ಬಡಿತ ನಿಲ್ಲದು..!
ಇದರಲ್ಲಾದ ಒಂದೇ ಒಂದು ಸಮಸ್ಯೆ..
‘ಆ ಹೃದಯಕ್ಕೆ ಕರುಣೆಯೇ ಇರುತ್ತಿರಲಿಲ್ಲ..’
ಯಾರೇ ಸತ್ತರು, ಯಾರೇ ಹೋದರು
ಬಡಿತದಲ್ಲಿ ಏರುಪೇರು
ಆಗುವುದೇ ಇಲ್ಲ..!
ನಿಜ ಅದು ಕಲ್ಲು ಹೃದಯ..
ಏಕೆಂದರೆ ಅದು ಮೆಶಿನ್ ಹಾರ್ಟ್..!
ಅದಕ್ಕೆ ಬಡಿಯುವುದೊಂದೇ
ಗೊತ್ತು..
ಮಿಡಿಯಲು ಗೊತ್ತಿಲ್ಲ..!
✍ಯತೀಶ್ ಕಾಮಾಜೆ





