ಕಲಬುರಗಿ: ಮಹಾಮಾರಿ ಕೊರೋನ ವೈರಸ್‌ನಿಂದ ಮೃತಪಟ್ಟ ಕಲಬುರಗಿಯ ಮುಹಮ್ಮದ್ ಹುಸೈನ್ ಸಿದ್ದೀಕಿ (76) ಅವರ ಕುಟುಂಬದ ಮತ್ತೋರ್ವ ಸದಸ್ಯನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿದ್ದು, ಎಲ್ಲರನ್ನೂ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನ ಸೋಂಕಿನಿಂದ ಕಲಬುರಗಿಯಲ್ಲಿ ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಲ್ಲಿ ವೈರಸ್ ಇರುವುದು ಈಗಷ್ಟೇ ನಮಗೂ ತಿಳಿದು ಬಂದಿದೆ ಎಂದು ಆರೋಗ್ಯ ಕುಟುಂಬ ಇಲಾಖೆಯ ನಿರ್ದೇಶಕ ಡಾ. ಓಂ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದರು.
ಈ ಬಗ್ಗೆ ವಿವರಿಸಿದ ಆರೋಗ್ಯ ಕುಟುಂಬ ಇಲಾಖೆಯ ನಿರ್ದೇಶಕ ಮೃತ ಕುಟುಂಬದ ನಾಲ್ವರನ್ನು ಪರೀಕ್ಷೆಗೊಳಪಡಿಸಿ ಕಲಬುರಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಪರೀಕ್ಷೆ ಮಾಡಿದ ನಾಲ್ವರ ಪೈಕಿ ಮೂವರ ವರದಿ ನೆಗೆಟಿವ್ ಆಗಿ ಬಂದು, ಒಬ್ಬ ಸಂಬಂಧಿಕರ ವರದಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದರು. ವೃದ್ಧನ ಆರೈಕೆ ಹೆಚ್ಚಾಗಿ ಅವರು ಮಾಡುತ್ತಿದ್ದರಿಂದ ಅವರಿಗೆ ಸೋಂಕು ತಗುಲಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here