



ಬಂಟ್ವಾಳ: ಕೊರೊನಾ ವೈರಸ್ ತಡೆಗಟ್ಟಲು ಸಾರ್ವಜನಿಕರ ಸಹಕಾರ ಕೋರಿ ತಹಶೀಲ್ದಾರ್ ಕಚೇರಿಯಾದ ಮಿನಿ ವಿಧಾನ ಸೌಧದಲ್ಲಿ ಮನವಿ ಪತ್ರಗಳನ್ನು ಅಂಟಿಸಲಾಗಿದೆ.
ಮಹಾಮಾರಿ ಸಾಂಕ್ರಾಮಿಕ ವೈರಸ್ ಕೊರೊನೊ ತಡೆಗಟ್ಟಲು ಮಿನಿವಿಧಾನ ಸೌಧವನ್ನು ಶುಚಿತ್ವವಾಗಿಡಿ, ಸ್ವಚ್ಚತೆ ಕಾಪಾಡಿ, ಅಲ್ಲಲ್ಲಿ ಉಗುಳುವುದನ್ನು ಬಿಡಿ ಹೀಗೆ ಬರೆದ ಮನವಿ ಪತ್ರಗಳನ್ನು ಗೋಡೆಯಲ್ಲಿ ಅಂಟಿಸಲಾಗಿದೆ. ದಿನವೊಂದಕ್ಕೆ ನೂರಕ್ಕೂ ಅಧಿಕ ಮಂದಿ ಈ ಕಚೇರಿಗೆ ವಿವಿಧ ಕೆಲಸಗಳಿಗಾಗಿ ನಿತ್ಯ ಅಗಮಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್ ತಿಳಿಸಿದ್ದಾರೆ.






