


ಬಂಟ್ವಾಳ: ಚುನಾವಣಾ ಸಂದರ್ಭದಲ್ಲಿ ಜನರ ಬೇಡಿಕೆಗನುಸಾರವಾಗಿ ನೀಡಿದ ಭರವಸೆಗಳನ್ನುಈಡೇರಿಸಿದಲ್ಲಿ ಜನಪ್ರತಿನಿಧಿಗಳು ಜನಸಾಮಾನ್ಯರ ವಿಶ್ವಾಸ ಉಳಿಸಿದಂತಾಗುವುದು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಮಂಗಳೂರು ಶಾಸಕರು, ಮಾಜಿ ಸಚಿವ ಯು.ಟಿ.ಖಾದರ್ ಅವರು ಇರಾ ಗ್ರಾಮದ 1 ಕೋಟಿ 85 ಲಕ್ಷ ರೂಪಾಯಿ ಅಂದಾಜು ಮೊತ್ತದ ಕಾಪಿಕಾಡು, ಪಂಜಾಜೆ, ಸೂತ್ರಬೈಲು, ನೂಜಿ, ಕೊಕಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ತಿಳಿಸಿದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ಅಬ್ದುಲ್ ಜಲೀಲ್, ನಾಸೀರ್ ನಡುಪದವು, ಅರುಣ್ ಡಿಸೋಜ, ಗ್ರಾಮ ಪಂಚಾಯತ್ ಸದಸ್ಯರಾದ ಸಮಿಯುಲ್ಲಾ ಕುಕ್ಕಾಜೆ, ಜಿ.ಎಂ.ಇಬ್ರಾಹಿಂ, ಹನೀಫ್ ಬಾಳೆಪುಣಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಸೂತ್ರಬೈಲು, ಗಣ್ಯರಾದ ಪದ್ಮನಾಭ ಕಾಜವ, ವಿಶ್ವನಾಥ ಶೆಟ್ಟಿ ಕುಕ್ಕಾಜೆ, ಇಸ್ಮಾಯಿಲ್ ದರ್ಬೆ, ಮೊಯಿದಿನ್ ಕುಂಞಿ ದರ್ಭೆ, ಕಿಶೋರ್ ಸುವರ್ಣಬೈಲು, ಗುತ್ತಿಗೆದಾರರಾದ ನಾಸೀರ್ ಕೊಣಾಜೆ, ಹಾಗೂ ಊರಿನ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





