ದೈವ ಪಾತ್ರಿಗಳು ಗೋಪುರದ ಬಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಸೇರಿಗಾರನು ಗುಟ್ಟಾಗಿ ದೈವಪಾತ್ರಿಯ ಕಿವಿಯಲ್ಲಿ ಹೇಳುತ್ತಿದ್ದಂತೆ ಭಕ್ತರು ಕಿವಿ ಅಗಲಿಸಿ ನಿಂತಿದ್ದರು. ದೈವಪಾತ್ರಿಯು ’29 ಪೋಪಿನಾನಿ ಸುಕ್ರಾರ ದಿನತ್ತಾನಿ ಆರಡ’ ಎನ್ನುತ್ತಿದ್ದಂತೆ ಜನರೆಲ್ಲ ‘ಬಾರೀ ಎಡ್ಡೆ ದಿನ’ ಎಂದು ಉದ್ಘರಿಸಿದರು.

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳುತ್ತಿದ್ದಂತೆ, ಜಾತ್ರೆಯ ಬಹುನಿರೀಕ್ಷಿತ ದಿನ ನಿಗದಿಪಡಿಸುವ ವಿಶಿಷ್ಟ ಸಾಂಪ್ರದಾಯ ಕದ್ರ್‌ ಮುಡಿ ಏರಿಸಿ ‘ಕುದಿ’ ಕರೆಯಲಾಗಿದ್ದು, ’29 ಪೋಪಿನಾನಿ ಶುಕ್ರವಾರ ದಿನತ್ತಾನಿ ಆರಡ…’ ಎನ್ನುವ ಮೂಲಕ ಕುತೂಹಲದಲ್ಲಿ ಕಾಯುತ್ತಿರುವ ಭಕ್ತರಿಗೆ ಖುಷಿ ಕೊಟ್ಟಿದೆ.*

*’ಈ ಸರ್ತಿ 29 ದಿನ ಮುಗುಲಿ ಬೈದ್‌ಂಡ್‌.. ಅಪ್ಪೆ ಬಾರಿ ಕುಸಿಟ್‌ ಉಲ್ಲೆರ್‌’ ಎನ್ನುವ ಮೂಲಕ ಭಕ್ತರು ಸಂತಸಪಟ್ಟರು. ಅಲ್ಲದೆ 29 ದಿನಗಳ ಅದ್ಧೂರಿ ಜಾತ್ರೆ ಪ್ರಾರಂಭಗೊಂಡಿದೆ.*

*ಗುರುವಾರ ರಾತ್ರಿ ನಂದ್ಯ ಭಗವತಿ ಕ್ಷೇತ್ರದಿಂದ ಹಾಗೂ ಮಳಲಿ ಉಳಿಪಾಡಿಗುತ್ತಿನಿಂದ ಭಂಡಾರ ಆಗಮಿಸಿ ಗುರುವಾರ ರಾತ್ರಿ ಧ್ವಜಾರೋಹಣಗೊಂಡು ಕೊಡಿ ಬಲಿ ಉತ್ಸವ ನಡೆಯಿತು. ಶುಕ್ರವಾರ ಮುಂಜಾನೆ ಕಂಚು ಬೆಳಕು(ಕಂಚಿಲ್‌) ಬಲಿ ಉತ್ಸವ ನಡೆಯಿತು. ನೂರಾರು ಮಂದಿ ಕಂಚಿಲ್‌ ಸೇವೆಯ ಹರಕೆ ತೀರಿಸಿಕೊಂಡರು. ಕಂಚಿಲ್‌ನ ಬಳಿಕ ಸಣ್ಣ ರಥೋತ್ಸವ ನಡೆಯಿತು.*

*ಬುಧವಾರ ರಾತ್ರಿ ಪೊಳಲಿಯ ನಟ್ಟೋಜರು ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಜೋಯಿಸರು ನಿಗದಿಪಡಿಸಿದ ದಿನವನ್ನು ಗೌಪ್ಯವಾಗಿ ಇಟ್ಟು, ಹಿಂಗಾರದ ಹಾಳೆಯೊಂದಿಗೆ ಪೊಳಲಿ ದೇವಾಲಯಕ್ಕೆ ಬಂದು ಗುರುವಾರ ರಾತ್ರಿ ಅರ್ಚಕರ ಕೈಯಲ್ಲಿ ಕೊಟ್ಟ ನಟ್ಟೋಜರು ಪ್ರಸಾದ ಸ್ವೀಕರಿಸುತ್ತಾರೆ.*

*29 ಪೋಪಿನಾನಿ ಶುಕ್ರವಾರ ದಿನತ್ತಾನಿ ಆರಡ…*

*ಶುಕ್ರವಾರ ನಟ್ಟೋಜರು ಹಿಂಗಾರದ ಹಾಳೆಯನ್ನು ಶ್ರೀ ದುರ್ಗಾಪರಮೇಶ್ವರಿ ಗುಡಿಯ ಹಿಂಭಾಗ ನಿಂತಿದ್ದ ಸೇರಿಗಾರನ ಕೈಯಲ್ಲಿ ನೀಡಿ, ಕಿವಿಯಲ್ಲಿ ಜಾತ್ರಾ ದಿನಗಳ ಅವಧಿಯ ಬಗ್ಗೆ ಗುಟ್ಟಾಗಿ ಹೇಳಿದರು. ಪ್ರಮಾಣ ಬಾವಿಯ ಬಳಿ ಭಗವತೀ ದೇವಿಯ ಕದ್ರ್ ಮೂಡಿ ಏರಿದ ನಂತರ ಸೋಮಕಾಸುರ ಮತ್ತು ರೇಂಜಕಾಸುರ (ದೈವಗಳು) ವೇಷಾಧಾರಿ ದೈವ ಪಾತ್ರಿಗಳು ಗೋಪುರದ ಬಳಿ ದೇವರಿಗೆ ಪೂಜೆ ಸಲ್ಲಿಸಿ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಸೇರಿಗಾರನು ಗುಟ್ಟಾಗಿ ದೈವಪಾತ್ರಿಯ ಕಿವಿಯಲ್ಲಿ ಹೇಳುತ್ತಿದ್ದಂತೆ ಭಕ್ತರು ಕಿವಿ ಅಗಲಿಸಿ ನಿಂತಿದ್ದರು ದೈವಪಾತ್ರಿಯು ’29 ಪಾಪಿನಾನಿ ಸುಕ್ರಾರಾ ದಿನತ್ತಾನಿ ಆರಡ’ ಎನ್ನುತ್ತಿದ್ದಂತೆ ಜನರೆಲ್ಲಾ ‘ಬಾರಿ ಎಡ್ಡೆ ದಿನ ‘ ಎಂದು ಉದ್ಘಾರಿಸಿದರು*

*ಒಟ್ಟು 29 ದಿನಗಳ ಜಾತ್ರೆ*

*5 ದಿನಗಳ ಚೆಂಡು*
*ಮಾರ್ಚ್ 15 ರಿಂದ ಜಾತ್ರೆ ಆರಂಭ*

*ಏಪ್ರಿಲ್ 6: 1ನೇ ಚೆಂಡು*
*ಏಪ್ರಿಲ್ 7: 2ನೇ ಚೆಂಡು*
*ಏಪ್ರಿಲ್ 8: 3ನೇ ಚೆಂಡು*
*ಏಪ್ರಿಲ್ 9: 4ನೇ ಚೆಂಡು*
*ಏಪ್ರಿಲ್ 10: ಕಡೆ ಚೆಂಡು*
*ಏಪ್ರಿಲ್ 11: ಮಹಾ ರಥೋತ್ಸವ*
*ಏಪ್ರಿಲ್ 12:ಆರಡ (ಅವಭೃತ ಸ್ನಾನ)*

*ಇದಲ್ಲದೆ 5 ದಿನಕ್ಕೊಮ್ಮೆ ದಂಡ ಮಾಲೆ ಕೋಳಿ ಗುಂಟ*

*ಜಾತ್ರೆ ಕೊನೆಗೊಂಡ ಬಳಿಕ ಕೊಡಮಣಿತ್ತಾಯ – ಉಳ್ಳಾಕ್ಲು – ಮಗರಂತಾಯಿ – ಬಂಟ ಪರಿವಾರ ದೈವಗಳ ನೇಮೋತ್ಸವ*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here