


ವಿಟ್ಲ: ವಿಶ್ವದಾದ್ಯಂತ ಭಯ ಹುಟ್ಟಿಸಿರೋ ಕೊರೋನಾ ವೈರಸ್ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಬಂದ್ ಗೆ ನಿರ್ಧರಿಸಿದೆ. ಈ ಒಂದು ವಾರ ಯಾವುದೇ ಸಭೆ- ಸಮಾರಂಭಗಳು ಆಚರಿಸದಂತೆ ಸಿ.ಎಂ. ಮನವಿ ಮಾಡಿದ್ದಾರೆ. ಅದಲ್ಲದೇ ಮಾಲ್, ಸಿನೆಮಾ ಥಿಯೇಟರ್ ಗಳು, ಪಬ್ ಗಳನ್ನು ಬಂದ್ ಮಾಡಲು ಸೂಚಿಸಿದ್ದಾರೆ.
ಈ ಹಿನ್ನೆಲೆ ಮಾ.15ರಂದು ನಡೆಸಲು ನಿಗದಿಯಾಗಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಸರಕಾರದ ಆದೇಶವನ್ನು ಗೌರವಿಸಿ ಮುಂದೂಡಲಾಗಿದೆ. ಈ ಕಾರ್ಯಕ್ರಮ ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ವಿಟ್ಲದ ರಥದ ಗದ್ದೆಯಲ್ಲಿ ಆಯೋಜಿಸಲಾಗಿತ್ತು.





