ನವದೆಹಲಿ: ವಿಶ್ವದೆಲ್ಲೆಡೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ತುರ್ತು ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಿದೆ. ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ವಿವಿಧ ರಾಜ್ಯಗಳಾದ ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿಯೂ ಇಂದು ಕೊರೊನಾ ವೈರಸ್​ ಪ್ರಕರಣಗಳು ಪತ್ತೆಯಾದ ಬಗ್ಗೆ ವರದಿ ಇದೆ.
ಒಟ್ಟಾರೆಯಾಗಿ ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯವಾಣಿ ಸಂಖ್ಯೆಯನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದಲ್ಲಿ ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಇದೆ. ಅದರ ಪ್ರಕಾರ ಕರ್ನಾಟಕದ ಜನರು ನೆರವಿಗಾಗಿ 104 ಸಂಖ್ಯೆಗೆ ಕರೆ ಮಾಡಬಹುದು.
ಇನ್ನುಳಿದ ರಾಜ್ಯಗಳ ಸಹಾಯವಾಣಿ ಸಂಖ್ಯೆ ಇಂತಿವೆ:
ಆಂದ್ರ ಪ್ರದೇಶ – 0866-2410978
ಅರುಣಾಚಲ ಪ್ರದೇಶ-9436055743
ಅಸ್ಸಾಂ-6913347770
ಛತ್ತಿಸ್ ಘಡ್-07712235091
ನವದೆಹಲಿ-01122307145
ಹರ್ಯಾಣ-8558893911
ಜಮ್ಮು-01912520982
ಕಾಶ್ಮೀರ-01942440283
ಕೇರಳ-04712552056
ಲಡಾಕ್- 01982256462
ಮಧ್ಯಪ್ರದೇಶ- 0755-2527177
ಮಹಾರಾಷ್ಟ್ರ- 020-26127394
ನಾಗಾಲ್ಯಾಂಡ್- 7005539653
ಒಡಿಶಾ-9439994859
ರಾಜಸ್ಥಾನ್-01412225624
ತಮಿಳುನಾಡು-04429510500
ತ್ರಿಪುರಾ-03812315879
ಉತ್ತರಪ್ರದೇಶ-18001805145
ಪಶ್ಚಿಮ ಬಂಗಾಳ-3323412600
ಅಂಡಮಾನ್ ಮತ್ತು ನಿಕೋಬಾರ್ -03192232102
ಬಿಹಾರ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್ , ಕರ್ನಾಟಕ, ಪಂಜಾಬ್, ಸಿಕ್ಕಿಂ, ತೆಲಂಗಾಣ, ಉತ್ತರಖಾಂಡ್, ದಾದ್ರ ಮತ್ತು ಹವೇಲಿ, ದಿಯು ಮತ್ತು ದಾಮನ್, ಲಕ್ಷದೀಪ, ಪುದುಚೇರಿ ಜನರು 104 ಸಂಖ್ಯೆಗೆ ಕರೆ ಮಾಡಿ ಅಗತ್ಯ ನೆರವು ಪಡೆಯಬಹುದು. ಮೇಘಾಲಯ ಮತ್ತುಯ ಮಿಜೋರಾಂ ಜನರು 108 ಮತ್ತು 102 ಸಂಖ್ಯೆ ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here