



ವಿಟ್ಲ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವಿಟ್ಲ ರೀಜಿನಲ್ ಇದರ ವತಿಯಿಂದ ಎಸ್ಎಂಎ ಅಲರ್ಟ್ 2020 ಕಾರ್ಯಕ್ರಮ ಇತ್ತೀಚೆಗೆ ವಿಟ್ಲ ಶಾಂತಿನಗರ ಮದ್ರಸ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಸ್ಎಂಎ ಜಿಲ್ಲಾಧ್ಯಕ್ಷ ಹಾಜಿ ಹಮೀದ್ ಕೊಡಂಗಾಯಿ ಉದ್ಘಾಟಿಸಿ ಮಾತನಾಡಿ ಮದರಸ ಶಿಕ್ಷಣದಿಂದ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಮದರಸ ಸಬಲೀಕರಣ ಹಾಗೂ ಎಸ್ಎಂಎ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮದರಸ ವ್ಯವಸ್ಥೆ ಆಧುನಿಕ ಶೈಲಿ ಗೊಳಿಸಲು ಎಸ್ಎಂಎ ರಾಜ್ಯ ಸಮಿತಿ ಮುಂದಾಗಲಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಂಎ ವಿಟ್ಲ ರಿಜಿನಲ್ ಅಧ್ಯಕ್ಷ ಷರೀಫ್ ಉಕ್ಕುಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಎಂಎ ರಾಜ್ಯ ಕಾರ್ಯದರ್ಶಿ ಅಬ್ದುರಹ್ಮನ್ ಮದನಿ ಜಪ್ಪು ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ವಿಟ್ಲ ಎಸ್ ಜೆಎಂ ಅಧ್ಯಕ್ಷ ಅಬ್ದುರಹ್ಮನ್ ಮದನಿ ಪೆರುವಾಯಿ, ಹಕ್ಕಿಂ ಶಾಂತಿನಗರ, ವಿಟ್ಲ ಝೋನ್ ಕಾರ್ಯದರ್ಶಿ ಕಾಸಿಂ ಸಖಾಫಿ, ಅರೀಸ್ ಮದನಿ ಶಾಂತಿನಗರ, ಹಾರೀಶ್ ಓಕೆ ತೋರು, ಅಬೂಬಕ್ಕರ್ ಫೈ, ಎಸ್ಎಂಎ ಕೋಶಾಧಿಕಾರಿ ಉಸ್ಮಾನ್, ಕಾರ್ಪೋರೇಶನ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.
ಎಸ್ಎಂಎ ಪ್ರಧಾನ ಕಾರ್ಯದರ್ಶಿ ಮಜಿದ್ ಸಖಾಫಿ ಸ್ವಾಗತಿಸಿದರು. ರಜಾಕ್ ಸಹದಿ ವಂದಿಸಿದರು.






