Saturday, April 6, 2024

ರಿಂಗಣ

ವಿರಮಿಸದಿರುವ ಮನವೆ ನೀನು
ರಮಿಸಬೇಡ ಹೀಗೆ ನನ್ನ
ಕೆನ್ನೆ ತಟ್ಟಿ ತುಟಿಯ ಮುಟ್ಟಿ
ಹೇಳಬೇಡ ‘ನೀನೆ ಚೆನ್ನ’

ಏಕೆ ಹೀಗೆ ಲಲ್ಲೆಗರೆವೆ ?
ಮೆಲು ದನಿಯಲಿ ನನ್ನ ಕರೆವೆ
ನಿನ್ನ ಬಳಿಗೆ ಬರುವೆ ನಾನು
ಒಲವ ತೋರಿ ನನ್ನೆ ಮರೆವೆ

ಬಾನ ದಾರಿಗುಂಟ ನಡೆವೆ
ನಿನ್ನ ತೋಳ ಮೇಳದಲ್ಲಿ
ಚಂದ್ರ ತಾರೆ ಹಿಡಿದು ತರುವೆ
ಕಣ್ಣ ಬಿಂಬದಾಳದಲ್ಲಿ

ನಭಕು ನೆಲಕು ಸೆರಗ ಹಾಸಿ
ಚುಕ್ಕಿ ಚಿತ್ರ ಬರೆವೆ ನಾನು
ನನ್ನ ಅಂದ ಕಂಡು ಹಿಗ್ಗಿ
ಹೊತ್ತು ಒಯ್ವೆ ನನ್ನ ನೀನು

ಹೀಗೆ ಇರಲಿ ನಮ್ಮ ಒಲವು
ಸುರಿಸುತಿರಲಿ ಜೇನು ಮಾವು
ಸವಿದು ಕುಣಿದು ತಣಿದು ಚಣದಿ
ಬೀಗಿ ನೀಗಲೆಮ್ಮ ನೋವು

ನೀ. ಶ್ರೀಶೈಲ ಹುಲ್ಲೂರು

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....