ವಿಟ್ಲ: ಒಡಿಯೂರು ಶ್ರೀ ಗುರುದೇವ ಐ.ಟಿ.ಐ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಸಹಯೋಗದೊಂದಿಗೆ ಎರಡು ದಿನಗಳ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನವು ಒಡಿಯೂರು ಶ್ರೀ ಗುರುದೇವ ಐ.ಟಿ.ಐ ಕನ್ಯಾನದಲ್ಲಿ ಜರಗಿತು.
ಈ ಕಾರ್ಯಕ್ರಮವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ದೀಪೋಜ್ವಲನೆಗೊಳಿಸಿ, ಆಧಾರ್ ತಿದ್ದುಪಡಿ ಅಭಿಯಾನ ಒಂದು ಉತ್ತಮವಾದ ಸಮಾಜ ಸೇವೆ, ಜಗತ್ತಿನಲ್ಲಿ ಬದಲಾವಣೆಯಾಗಿ ಬದುಕುವ ಅಧಾರವೇ ಧರ್ಮವಾಗಿರಬೇಕು. ಧರ್ಮದ ಆಚರಣೆಯೇ ಆಧಾರ. ಇಂತಹ ಒಳ್ಳೆಯ ಸಮಾಜ ಸೇವೆ ಕಾರ್ಯಗಳು ಜನ ಸಾಮಾನ್ಯರಿಗೆ ಅತೀ ಮುಖ್ಯವಾಗಿವೆ ಎಲ್ಲರೂ ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿಸಿ,ಅಂಚೆ ಅಧೀಕ್ಷರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೂ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರಿನ ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ ಎಮ್. ಅತಿಥಿಯಾಗಿ ಭಾಗವಹಿಸಿ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ತುಂಬಾ ಅಗತ್ಯವಾಗಿದೆ ಎಂದು ತಿಳಿಸುತ್ತಾ, ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವ ಬಗ್ಗೆ ಮಾಹಿತಿ ನೀಡಿದರು.
ಈ ಅಭಿಯಾನದಲ್ಲಿ ಸುಮಾರು 350 ಜನರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಸಂಸ್ಥೆಯ ಪ್ರಾಚಾರ್ಯ ಕರುಣಾಕರ ಎನ್.ಬಿ. ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಲಿಂಗಪ್ಪ ಗೌಡ ಪನೆಯಡ್ಕ, ಯಶವಂತ ವಿಟ್ಲ, ಕೆ.ಪಿ.ರಘುರಾಮ ಶೆಟ್ಟಿ ಕನ್ಯಾನ ಮತ್ತಿತರಿದ್ದರು.

ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಪ್ರವೀಣ ಕುಮಾರ್ ಎನ್. ವಂದಿಸಿದರು. ವಿನೋದ್ ಕೆ. ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here