


ಜಗತ್ತಿನಾದ್ಯಂತ
ಬೋರ್ಡ್ ತೂಗಿಬಿಡಲಾಗಿತ್ತು..
ಅದೇ
“ನೋ ಇಂಟರ್ನೆಟ್ “…!?
ಕಾರಣ ಇಷ್ಟೇ..
ಇಂಟರ್ನೆಟ್ ಉಪಯೋಗಿಸಿದವರೆಲ್ಲ
ಯಮನತ್ತ ಸಾಗುತ್ತಿದ್ದರು..!
ಮೊದ ಮೊದಲು ದಿನವಿಡೀ
ಇಂಟರ್ನೆಟ್ ಬಳಸಿದವನು ಸಾಯುತ್ತಿದ್ದನು,
ದಿನ ಕಳೆದಂತೆ
ದಿನಕ್ಕೆ ಒಂದು ಗಂಟೆ ಉಪಯೋಗಿಸಿದವರು ಸತ್ತರೆ
ಕೊನೆಗೆ ಒಮ್ಮೆ ಆನ್ ಮಾಡಿದರೆ ಸಾಕು..
ಅಲ್ಲೇ ಮರಣ ಪ್ರಾಪ್ತಿ..!
ಯಾಕೆ ಹೀಗೆ..,
ಇದಕ್ಕೇನು ಕಾರಣ..? ಯೋಚಿಸುವಷ್ಟು ಸಮಯವಿಲ್ಲ..
ಈಗ ಇದ್ದ ದಾರಿ ಒಂದೇ
ಅದೇ “ನೋ ಇಂಟರ್ನೆಟ್”..!
ಇಂಟರ್ನೆಟ್ ಸ್ಥಗಿತಗೊಂಡಿದೆ.
ಯಾರು ಕೇಳುವಂತಿಲ್ಲ
ಕೇಳುವ ಧೈರ್ಯವು ಇಲ್ಲ..
ಯಾಕೆಂದರೆ ಸಾವನ್ನು ಅಪ್ಪಿಕೊಳ್ಳಲು ಯಾರು
ತಯಾರಿರಲಿಲ್ಲ..!
ಸಾವಿರಾರು ಕೋಟಿ
ನಷ್ಟಕ್ಕೆ ಇದು ಕಾರಣವಾಯಿತು..
ಐಟಿ ಬಿಟಿ ಕಂಪೆನಿಗಳು
ಮುಚ್ಚಿ ಹೋದವು..
ಶ್ರೀಮಂತ ರಾಷ್ಟ್ರಗಳು ಬಡವಾದವು..
ದೇಶ ವಿದೇಶಗಳ ಮಧ್ಯೆ
ಸಂಪರ್ಕ ನಿಂತು ಬಿಟ್ಟವು.
ಶ್ರೀಮಂತನೆಂದು ಮೆರೆದವನು ಕಳೆದುಕೊಂಡ.
ಯಾರು ಮತ್ತೆ
ಇಂಟರ್ನೆಟ್ ಸಹವಾಸಕ್ಕೆ ಹೋಗಲಿಲ್ಲ..
ಮದುವೆಗೆ ಕರೆಯಬೇಕಾದರೆ
ಮನೆ ಬಾಗಿಲಿಗೆ ಹೋಗಿ ಕರೆಯುತ್ತಿದ್ದರು..
ಅಜ್ಜಿ ಕಥೆಗೆ ಮತ್ತೆ ಪ್ರಾಧಾನ್ಯತೆ.
ಆನ್ ಲೈನ್ ಫುಡ್ ಇಲ್ಲ
ಅಮ್ಮನ ಅಡುಗೆ ಪಾಠ ಮತ್ತೆ ಶುರು ಮಗಳಿಗೆ..
ಬಾಂಧವ್ಯದ ಸವಿ ಸಿಕ್ಕದ್ದೇ ಈಗ..
ಸಾವು ಹೇಗೆ ಬೇಕಾದರೂ
ಬರಬಹುದು,
ಆದರೆ ಸಂಬಂಧಗಳು..!
✍ಯತೀಶ್ ಕಾಮಾಜೆ





