ಮಂಗಳೂರು: ಜಗತ್ತಿನೆಲ್ಲೆಡೆ ಭಯ ಹುಟ್ಟಿಸಿರೋ ಕೊರೋನಾ ವೈರಸ್ ಗೆ ಭಾರತದಲ್ಲಿ ಒಟ್ಟು 73 ಮಂದಿ ತುತ್ತಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದ್ದು, ಈ ಸೋಂಕಿತರ ಪಟ್ಟಿಯಲ್ಲಿ ಭಾರತದಲ್ಲಿರುವ ವಿದೇಶಿಗರೂ ಕೂಡ ಸೇರಿದ್ದಾರೆ ಎಂದು ಹೇಳಿದೆ. ಅದರಂತೆ ಕೇರಳದಲ್ಲಿ 17 ಮಂದಿ, ಹರ್ಯಾಣದಲ್ಲಿ 14 ಮಂದಿ ವಿದೇಶಿಗರು, ರಾಜಸ್ಥಾನ ಮೂರು (1 ಭಾರತೀಯ, 2 ವಿದೇಶಿಗರು), ದೆಹಲಿಯಲ್ಲಿ 6 ಮಂದಿ ಭಾರತೀಯರು, ತೆಲಂಗಾಣ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ತಲಾ ಒಬ್ಬೊಬ್ಬರಲ್ಲಿ ಸೋಂಕು ಕಂಡು ಬಂದಿದೆ.
ಉತ್ತರ ಪ್ರದೇಶದಲ್ಲಿ 10 ಮಂದಿ ಭಾರತೀಯರು ಮತ್ತು ಓರ್ವ ವಿದೇಶಿಗ ಸೋಂಕಿಗೆ ತುತ್ತಾಗಿದ್ದು, ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಢಾಕ್ ನಲ್ಲಿ 3 ಮಂದಿ, ಕರ್ನಾಟಕದಲ್ಲಿ ನಾಲ್ಕು ಮಂದಿ, ಮಹಾರಾಷ್ಟ್ರದಲ್ಲಿ 11 ಮಂದಿ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಒಟ್ಟು 73 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 56 ಮಂದಿ ಭಾರತೀಯರು ಮತ್ತು 17 ಮಂದಿ ವಿದೇಶಿಗರು ಇದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here