ಬಂಟ್ವಾಳ: ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಅಳಿಕೆ ಗ್ರಾಮದ ಕೆಳಗಿನ ಮುಳಿಯ ನಾರಾಯಣ ಮೂಲ್ಯ ಅವರ ಪತ್ನಿ ಸುಶೀಲಾ ( 50) ಎಂದು ಗುರುತಿಸಲಾಗಿದೆ.
ನಾರಾಯಣ ಮೂಲ್ಯ ಅವರಿಗೆ ಎರಡು ಮದುವೆಯಾಗಿದ್ದು ಇವರಿಗೆ ಮಕ್ಕಳಾಗಿರಲಿಲ್ಲ.
ಈ ಕೊರಗಿನಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತಿ ಪೋಲೀಸರಿಗೆ ತಿಳಿಸಿದ್ದಾರೆ.

ಸಾವಿನ ಬಗ್ಗೆ ಸಂಶಯ
ಈ ಸಾವಿನ ಬಗ್ಗೆ ಸಂಶಯ ವಿದೆ ಹಾಗಾಗಿ ಈ ಸಾವಿನ ನ್ಯಾಯಯುತವಾದ ತನಿಖೆಯಾಗಬೇಕು ಎಂದು ಸುಶೀಲಾ ಅವರ ತಮ್ಮ ನಾರಾಯಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here