






ಬಂಟ್ವಾಳ: ಕಜೆ ಶ್ರೀ ರಾಮ ಭಜನಾ ಮಂದಿರದ ದಶಮಾನೋತ್ಸವ ಸಮಾರಂಭ ಇದೇ ಬರುವ ಮಾ.31 ಹಾಗೂ ಏ.1ರಂದು ವಿವಿಧ ವೈದಿಕ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿರುವುದು.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದಶಮಾನೋತ್ಸವ ಸಮಿತಿಯ ಗೌರವಧ್ಯಕ್ಷ ರಾಮಚಂದ್ರ ಭಟ್ ಕಜೆ ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಉಮನಾಥ ರೈ ಮೆರಾವು, ಕೇಶವರಾವ್ ನೂಜಿಪ್ಪಾಡಿ, ಚಂದ್ರಹಾಸ ರೈ ಬಾಲಾಜಿಬೈಲು, ಉದಯಶಂಕರ ಭಟ್ ಕೋಮಾಲೆ, ಕೇಶವ ಶೆಟ್ಟಿ ಮೇರಾವ್, ಪುಷ್ಪರಾಜ್ ಕುಕ್ಕಾಜೆ, ಶಿವರಾಮ ರೈ ಮೇರಾವು, ರಮೇಶ್ ರಾವ್ ಪತ್ತುಮುಡಿ, ನಾರಾಯಣ ನಾಯ್ಕ್ ಕಜೆ, ಪುರುಷೋತ್ತಮ ಸಾಲ್ಯಾನ್ ಮಂಚಿ, ಗಿರಿಯಪ್ಪ ಗೌಡ, ಉದಯಶಂಕರ್ ನಿರ್ಬೈಲು, ಕೃಷ್ಣರಾಜ್ ನಾಯಕ್, ಶಂಕರ ನಾಯಕ್, ಸದಸ್ಯರಾದ ಈಶ್ವರ ನಾಯ್ಕ್, ರಮೇಶ ನಾಯ್ಕ್ ಆನಂದ ನಾಯ್ಕ್, ಹೊನ್ನಪ್ಪ ಪೂಜಾರಿ, ರಾಜೇಶ ಪೂಜಾರಿ, ಜಯಂತ ನಾಯ್ಕ್, ಹರೀಶ್ ಕಜೆ, ರಮೇಶ್ ಪೂಜಾರಿ ಮಣ್ಣಗುಳಿ, ಗಣೇಶ್ ನಾಯ್ಕ್, ಉಮಾನಾಥ ಕಜೆ, ನಿತಿನ್ ಕಜೆ, ನವೀನ್ ಕಜೆ, ರತ್ನ ಕಜೆ ಭಾಗವಹಿಸಿದ್ದರು. ಭಜನಾ ಮಂದಿರದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕೋಮಾಲೆ ಪಡೀಲ್ ಸ್ವಾಗತಿಸಿ, ಕಾರ್ಯದರ್ಶಿ ಜಯಪ್ರಕಾಶ್ ರೈ ಮೇರಾವು ವಂದಿಸಿದರು. ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.





