



ಬಂಟ್ವಾಳ: ಬೆಂಗಳೂರು ಸಿ.ಸಿ.ಬಿ.ಪೋಲೀಸರ ವಶದಲ್ಲಿರುವ ರವಿಪೂಜಾರಿ ಅವರ ಬಗ್ಗೆ ವಿಚಾರಣೆಯ ದೃಷ್ಟಿಯಿಂದ ಪೂರ್ವ ಮಾಹಿತಿ ಪಡೆಯಲು ಜಿಲ್ಲಾ ಪೋಲೀಸ್ ಎರಡು ತಂಡಗಳು ಬೆಂಗಳೂರಿಗೆ ತೆರಳಿದೆ.
ಈಗಾಗಲೇ ಬೆಂಗಳೂರು ಪೋಲೀಸರ ಕೈಯಲ್ಲಿ ವಿಚಾರಣೆ ನಡೆಯುತ್ತಿರುವ ರವಿ ಪೂಜಾರಿ ಅವರನ್ನು ಮಂಗಳೂರಿನ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಮಯ ತಿಳಿಯುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ಪ್ರಕರಣ ಗಳು ಯಾವ ಹಂತದಲ್ಲಿ ಇದೆ, ಮತ್ತು ಬಳಿಕ ಮಂಗಳೂರಿಗೆ ವಿಚಾರಣೆಗೆ ಕರೆ ತರಲು ಅಥವಾ ಬೆಂಗಳೂರಿನಲ್ಲಿಯೆ ವಿಚಾರಿಸವುದೇ ಎಂಬ ಬಗ್ಗೆ ಸ್ಪಷ್ಟವಾದ ಚಿತ್ರ ಣಕ್ಕಾಗಿ ತೆರಳಿದೆ ಎಂಬ ಮಾಹಿತಿ ತಿಳಿದುಬಂದಿದೆ.
2010 ರಲ್ಲಿ ಕೇರಳದ ಉದ್ಯಮಿಯೋರ್ವರಿಗೆ ಬೆದರಿಕೆ ಹಾಕಿದ ಪ್ರಕರಣ ದಲ್ಲಿ ರವಿ ಪೂಜಾರಿ ಸಹಿತ 10 ಜನ ತಂಡದ ಮೇಲೆ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ರವಿ ಪೂಜಾರಿ ಮತ್ತು ಕಲಿ ಯೋಗೀಶ್ ಎಂಬವರನ್ನು ಹೊರತುಪಡಿಸಿ ಉಳಿದಂತೆ 8 ಜನರನ್ನು ಡಿ.ಸಿ.ಐ.ಬಿ ಮಂಗಳೂರು ತಂಡ ಮತ್ತು ವಿಟ್ಲ ಪೋಲೀಸರು ಮಾಣಿಯಲ್ಲಿ ಬಂಧನ ಮಾಡಿತ್ತು. ಈ ಪ್ರಕರಣ ದ ಬಗ್ಗೆ ವಿಚಾರಣೆ ಗಾಗಿ ತೆರಳುವ ಮುನ್ನ ಅಲ್ಲಿನ ಪ್ರಕರಣ ಗಳ ವಿಚಾರಣೆಗಳು ಯಾವ ಹಂತದಲ್ಲಿ ಇದೆ ಎಂಬ ಮಾಹಿತಿ ಪಡೆಯುವ ಸಲುವಾಗಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಮಂಗಳೂರು ಡಿ.ಸಿ.ಐ.ಬಿ.ವೃತ್ತ ನಿರೀಕ್ಷಕ ಚೆಲುವರಾಜ್ ಅವರ ನೇತ್ರತ್ವದ ಪೋಲೀಸ್ ತಂಡ ಇಂದು ಬೆಂಗಳೂರಿಗೆ ತೆರಳಿದೆ.





