ವಿಟ್ಲ: ಮಹಾನ್ ದಾರ್ಶನಿಕ ಬಸವಣ್ಣನವರ ‘ಅನುಭವ ಮಂಟಪ’ ಸಮಾಜ ತಿದ್ದುವ ಮತ್ತು ಅಭಿವೃದ್ಧಿಯ ಕೆಲಸಗಳು ಆರಂಭಗೊಂಡಿದ್ದವು. ಅದೇ ರೀತಿಯಲ್ಲಿ ಪುಣಚ ಗ್ರಾ.ಪಂ.ನ ಅನುಭವ ಮಂಟಪದಿಂದ ಗ್ರಾಮಾಭಿವೃದ್ಧಿಯ ಕೆಲಸಗಳು ನಿತ್ಯ ನಿರಂತರವಾಗಿ ನಡೆಯಲಿದೆ. ಪಂಚಾಯಿತಿ ಗ್ರಾಮಾಭಿವೃದ್ಧಿಯ ಅನುಭವ ಮಂಟಪವಾಗಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುಣಚ ಗ್ರಾಮ ಪಂಚಾಯಿತಿಯ ನೂತನ ಸಭಾಂಗಣ ‘ಅನುಭವ ಮಂಟಪ’ ಹಾಗೂ ನೂತನ ಗ್ರಂಥಾಲಯ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸವನ್ನು ಪಂಚಾಯಿತಿ ಮಾಡಬೇಕು. ಮತದಾರರಿಗೆ ನ್ಯಾಯ ಕೊಡುವ ಕೆಲಸ, ಅವರ ಬೇಡಿಕೆಗಳಿಗೆ ಸ್ಪಂದನೆ ಕೊಡುವ ಕೆಲಸ ‘ಅನುಭವ ಮಂಟಪ’ದಿಂದ ಆಗಲಿ ಎಂದರು.
ಪುಣಚ ಗ್ರಾಪಂ ಅಧ್ಯಕ್ಷೆ ಪ್ರತಿಭಾ ಶ್ರೀಧg? ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜರವರು ಮಾತನಾಡಿ, ಅನುಭವ ಮಂಟಪದಿಂದ ಸಮಾಜದ ಜನರಿಗೆ ಅನುಕೂಲತೆಗಳು ಸಿಗಲಿ ಆ ಮೂಲಕ ಗ್ರಾಮಾಭಿವೃದ್ಧಿಯಾಗಲಿ ಎಂದರು.
ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಕೊಳ್ನಾಡು ಕ್ಷೇತ್ರದ ಜಿಪಂ ಸದಸ್ಯ ಎಂಎಸ್.ಮಹಮ್ಮದ್ ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಜಿಪಂ ಸದಸ್ಯೆ ಜಯಶ್ರೀ ಕೋಡಂದೂರು, ಪುಣಚ ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಧಿಕಾರಿ ಗಾಯತ್ರಿ, ಪಿಡಿಒ ಲಾವಣ್ಯ ಪಿ ಉಪಸ್ಥಿತರಿದ್ದರು.
ಪುಣಚ ಗ್ರಾಪಂ ಸದಸ್ಯ ಉದಯ ಕುಮಾರ್ ದಂಬೆ ಸ್ವಾಗತಿಸಿದರು. ಸದಸ್ಯೆ ನಳಿನಾಕ್ಷಿ ಎಂ. ವಂದಿಸಿದರು. ಸದಸ್ಯ ಬಾಲಕೃಷ್ಣ ಹೆಚ್. ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಸಿಬ್ಬಂದಿಗಳಾದ ಮಮತಾ, ಸತ್ಯಪ್ರಕಾಶ್ ಉಸ್ಮಾನ್, ಅಶೋಕ್ ಹಾಗೂ ಗ್ರಂಥಾಲಯ ಇಲಾಖಾ ಸಿಬ್ಬಂದಿಗಳು ಸಹಕರಿಸಿದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ಇಂಜಿನಿಯರ್, ಗುತ್ತಿಗೆದಾರರನ್ನು, ೨೦ ವರ್ಷ ಕರ್ತವ್ಯ ನಿರ್ವಹಿಸಿದ ಪಂ. ಸಿಬ್ಬಂದಿಗಳಾದ ಶಿವರಾಮ, ರಾಮಣ್ಣ ನಾಯ್ಕ್, ಗ್ರಂಥಾಲಯ ಮೇಲ್ವಿಚಾರಕಿ ಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

 

 

,,,,,,

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here