ವಿಟ್ಲ: ಯುವ ನಾಯಕರ ನಾಯಕತ್ವದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಸಾಮಾಜಿಕ ಸೇವೆಗಳ ಮೂಲಕ ಮುನ್ನಡೆಯುತ್ತಿದೆ. ಜಿಲ್ಲೆಯಲ್ಲಿಯೇ ವಿಟ್ಲ ಲಯನ್ಸ್ ಕ್ಲಬ್ ಉನ್ನತ ಸ್ಥಾನದಲ್ಲಿದೆ. ಸೇವೆಗಳು ವೈವಿಧ್ಯಮಯವಾಗಿದ್ದರೆ ಮಾತ್ರ ಜನರಿಗೆ ಸೇವೆ ತಲುಪಲು ಸಾಧ್ಯವಿದೆ. ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೆ ಲಯನ್ಸ್ ಕ್ಲಬ್‌ನ ಸೇವೆ ತಲುಪಿದೆ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್ ಹೇಳಿದರು.
ಅವರು ಭಾನುವಾರ ವಿಟ್ಲ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದ ಪ್ರಯುಕ್ತ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ವಿಟ್ಲ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಮಾತನಾಡಿ ತನ್ನ ಅವಧಿಯಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ಶಾಲೆಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಗಿದೆ. ಅನಾರೋಗ್ಯ ಪೀಡಿತರಿಗೆ ಧನ ವಿತರಿಸುವ ಮೂಲಕ ಬಡವರ ಕಷ್ಟಗಳಿಗೆ ಸ್ಪಂದಿಸಲಾಗಿದೆ ಎಂದರು.
ಸಂತೋಷ್ ಕುಮಾರ್ ಶೆಟ್ಟಿ ಅವರು ಅಕ್ಷಯ ಪಾತ್ರೆಗೆ 30 ಮಕ್ಕಳಿಗೆ ಹಾಗೂ ವಿನ್ನಿ ಮಸ್ಕರೇಂಞಸ್ ಅವರು ೫ ಮಕ್ಕಳಿಗೆ ಧನ ಸಹಾಯ ವಿತರಿಸಿದರು. ಸಂತೋಷ್ ಕುಮಾರ್ ಶೆಟ್ಟಿ ಅವರು ನಂತೂರು ಶ್ರೀ ಭಾರತಿ ಕಾಲೇಜಿಗೆ, ತೆಂಗಿನ ಮರದಿಂದ ಬಿದ್ದು ಗಾಯಗೊಂಡಿರುವ ರವೀಂದ್ರ ಅವರಿಗೆ ಸಹಾಯಹಸ್ತ ನೀಡಲಾಯಿತು. ಗಂಗಾಧರ್ ಹಾಗೂ ಡಾ. ಗೀತಾಪ್ರಕಾಶ್ ಅವರು ಡಯಾಲಿಸಿಸ್ ಸೆಂಟರ್‌ಗೆ, ವಿ.ಎನ್ ಕೆದಿಲಾಯ ಮತ್ತು ಉಮಾ ಅವರು ಒಕ್ಕೆತ್ತೂರು ಕ್ಯಾನ್ಸರ್ ಪೀಡಿತರಿಗೆ ಧನಸಹಾಯ, ಬಿ. ಪುಷ್ಪಲತಾ ಅವರು ಒಕ್ಕೆತ್ತೂರು ರುಕಿಯಾ ಅವರಿಗೆ ಧನ ಸಹಾಯ, ಆದಂ ಒಕ್ಕೆತ್ತೂರು ಅವರು ಸ್ಥಾನಿಕ ಅವರಿಗೆ ವಾಕರ್, ಗಂಗಾಧರ್ ಅವರು ಯಶಸ್ವಿ ಅವರಿಗೆ ಧನಸಹಾಯ ವಿತರಿಸಿದರು. ಸುಶ್ಮಿತಾ ಅವರು ವಿಟ್ಲ ಲಯನ್ಸ್ ಕ್ಲಬ್‌ಗೆ ನೂತನವಾಗಿ ಸೇರ್ಪಡೆಗೊಂಡರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆರ್.ಕೆ ಆರ್ಟ್ಸ್‌ನ ರಾಜೇಶ್ ವಿಟ್ಲ ಹಾಗೂ ಚೆಸ್ ಆಟಗಾರ್ತಿ ಯಶಸ್ವಿ ಕೆ ಅವರನ್ನು ಸನ್ಮಾನಿಸಲಾಯಿತು. ಕಮಲ ಮೇಗಿನಪೇಟೆ ಅವರನ್ನು ಗೌರವಿಸಲಾಯಿತು. ಶಿವಂ ಡ್ಯಾನ್ಸ್ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್, ಪ್ರಥಮ ಉಪರಾಜ್ಯಪಾಲ ಡಾ,ಗೀತಾ ಪ್ರಕಾಶ್, ದ್ವಿತೀಯ ಉಪರಾಜ್ಯಪಾಲ ವಸಂತ ಶೆಟ್ಟಿ, ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣುಮಯ, ಕೋಶಾಧಿಕಾರಿ ಹರೀಶ್ ಶೆಟ್ಟಿ, ಕೋ ಆರ್ಡಿನೇಟರ್ ವಾಣಿ ಆಳ್ವ, ಝೋನ್ ಚೇಯರ್‌ಮ್ಯಾನ್ ಆನಂದ ರೈ, ಐಪಿಪಿ ಜಯ ರೈ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಮೊಹಮ್ಮದ್ ಕಲಂದರ್ ಉಪಸ್ಥಿತರಿದ್ದರು.
ಡಾ. ಗಾಯತ್ರಿ ಗೀತಾಪ್ರಕಾಶ್ ನಿರೂಪಿಸಿದರು. ಕಾರ್ಯದರ್ಶಿ ಮನೋಜ್ ಕುಮಾರ್ ರೈ ವಂದಿಸಿದರು. ಜೇಸಿಂತ ಮಸ್ಕರೇಂಞಸ್, ಭಾರತಿ, ಮಂಗೇಶ್ ಭಟ್, ಮೊಹಮ್ಮದ್ ಇಕ್ಬಾಲ್ ಹಾನೆಸ್ಟ್, ಹಿತಶ್ರೀ, ಸಿಂಧೂ ಶೆಟ್ಟಿ ವಿವಿಧ ಜವಾಬ್ದಾರಿ ನಿಭಾಯಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here