


ಬಂಟ್ವಾಳ: ಇರಾ ಡಿಫರೆಂಟ್ ಕ್ರಿಕೆಟರ್ಸ್ ಕುರಿಯಾಡಿ ಇದರ ವತಿಯಿಂದ ಕುರಿಯಾಡಿ ಕ್ರೀಡಾಂಗಣದಲ್ಲಿ 3 ದಿನಗಳಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಬ್ಲ್ಯಾಕ್ ಬೆಲ್ಟ್ ಕುರಿಯಾಡಿ ತಂಡವು ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿ ಪ್ರಥಮ ಟ್ರೋಫಿ ಹಾಗೂ 25 ಸಾವಿರ ನಗದನ್ನು ಪಡೆದುಕೊಂಡು, ಫ್ರೆಂಡ್ಸ್ ಮುಡಿಪುನ್ನಾರ್ ಕ್ರಿಕೆಟರ್ಸ್ ಮುಡಿಪು ತಂಡವು ರನ್ನರ್ಸ್ ಆಪ್ ಪ್ರಶಸ್ತಿ 15 ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆಯಲು ಯಶಸ್ವಿಯಾಯಿತು.
ಬ್ಲ್ಯಾಕ್ ಬೆಲ್ಟ್ ತಂಡದ ನಿಝಾಮ್ ಮತ್ತು ಹಾರೀಸ್ ಉತ್ತಮ ದಾಂಡಿಗ, ದಾಳಿಗಾರ, ಹಾಗೂ ಮುಡಿಪುನ್ನಾರ್ ತಂಡದ ಪ್ರಜ್ವಲ್ ಸರ್ವಾಂಗೀಣ ಆಟಗಾರರಾಗಿ ಪ್ರಶಸ್ತಿ ಪುರಸ್ಕೃತ ಗೊಂಡರು. ಹಿರಿಯ ಮುಂಬೈ ಉದ್ಯಮಿಗಳಾದ ಸದಾಶಿವ ಶೆಟ್ಟಿ ಕುರಿಯಾಡಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಬಹುಮಾನ ವಿವರಿಸಿದರು. ರಾಖೇಶ್ ರೈ ಕಲ್ಲಾಡಿ, ಮೊಯಿದಿಕುಂಞಿ ಕುರಿಯಾಡಿ, ಹೈದರ್ ಇರಾ, ಹನೀಫ್ ಕುರಿಯಾಡಿ, ಅಭಿಷೇಕ್ ಪಕ್ಕಳ, ರಹಿಮಾನ್ ಕುರಿಯಾಡಿ, ಇಕ್ಬಾಲ್ ಇರಾಸೈಟ್, ಸಿದ್ದೀಕ್ ಕುರಿಯಾಡಿ ಇನ್ನಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.





