ವಿಟ್ಲ: ವಿಟ್ಲ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದ ಪ್ರಯುಕ್ತ ಹಲವಾರು ಫಲಾನುಭವಿಗಳಿಗೆ ಧನ ಸಹಾಯ ವಿತರಣೆ ಹಾಗೂ ನಾನಾ ಸವಲತ್ತುಗಳ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಬೆಳಿಗ್ಗೆ ಕೆಲಿಂಜದಲ್ಲಿ ಜಿಲ್ಲಾ ಗವರ್ನರ್ ರೊನಾಲ್ಡ್ ಜೋಮ್ಸ್ ಹಾಗೂ ಅನಿತಾ ಜೋಮ್ಸ್ ಅವರನ್ನು ಸ್ವಾಗತಿಸಲಾಯಿತು.
ಜಿಲ್ಲಾ ಗವರ್ನರ್ ರೊನಾಲ್ಡ್ ಜೋಮ್ಸ್ ಅವರು ವಿವಿಧ ಸವಲತ್ತುಗಳನ್ನು ವಿತರಿಸಿದರು. ಕೆಲಿಂಜ ಅಂಗನವಾಡಿ ಕೇಂದ್ರಕ್ಕೆ ಸ್ಟೀಲ್ ಕಪಾಟು ಹಸ್ತಾಂತರ, ಮಂಗಳಪದವು ಅಂಗನವಾಡಿ ಕೇಂದ್ರ ಉದ್ಯಾನ ನವೀಕರಣ ಉದ್ಘಾಟನೆ, ಒಕ್ಕೆತ್ತೂರು ಸರ್ಕಾರಿ ಶಾಲೆಗೆ ದಿವಾಂಗತ ಸುಮಿತ್ರ ಟೀಚರ್ ಅವರ ಸ್ಮರಣಾರ್ಥ ಅವರ ಸಹೋದರಿ ಪುಷ್ಪಲತಾ ಅವರು ನಲಿಕಲಿ ಕಲಿಕೆಗೆ ನೀಡಿದ ೫೦ ಸಾವಿರ ವೆಚ್ಚದ ಡೆಸ್ಕ್ ಹಸ್ತಾಂತರ ಮಾಡಲಾಯಿತು. ಬೊಳಂತಿಮೊಗರು ಶಾಲೆಗೆ ಯುಪಿಎಸ್ ಬ್ಯಾಟರಿ ಹಸ್ತಾಂತರ, ಕಂಬಳಬೆಟ್ಟು ಎಂಬಲ್ಲಿಯ ವರ್ಶಿನಿ ಅವರ ಮನೆಗೆ ಭೇಟಿ ನೀಡಿ ಧನ ಸಹಾಯ ವಿತರಿಸಲಾಯಿತು. ಚಂದಳಿಕೆ ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್‌ಗೆ ಪ್ರೋಜೆಕ್ಟರ್ ಮತ್ತು ಪ್ರಿಂಟರ್ ಹಸ್ತಾಂತರ ಮಾಡಲಾಯಿತು. ಕೊಡಂಗಾಯಿ ಸರ್ಕಾರಿ ಶಾಲೆಗೆ ಶುದ್ಧಿಕರೀಸುವ ನೀರಿನ ಘಟಕ ಹಸ್ತಾಂತರ, ಬೊಬ್ಬೆಕೇರಿಯಲ್ಲಿ ನವೀಕರಣಗೊಂಡ ಸ್ವಾಗತ ನಾಮಫಲಕವನ್ನು ಉದ್ಘಾಟಿಸಲಾಯಿತು. ಡ್ಯನಡ್ಕ ಶಾಲೆಯಲ್ಲಿ ಎರಡು ಗೇಟ್‌ಗಳನ್ನು ಉದ್ಘಾಟಿಸಲಾಯಿತು. ಶಿವಾಜಿನಗರ ನಿವಾಸಿ ಅನಾರೋಗ್ಯ ಪೀಡಿತ ಭರತ್ ಅವರ ಚಿಕಿತ್ಸೆಗೆ ಧನ ಸಹಾಯ ವಿತರಿಸಲಾಯಿತು. ನೀರಕಣಿಯಲ್ಲಿ ಬಸ್ ತಂಗುದಾಣ ನವೀಕರಣ ಉದ್ಘಾಟಿಸಲಾಯಿತು.
ಈ ಸಂದರ್ಭ ಪ್ರಥಮ ಉಪರಾಜ್ಯಪಾಲ ಡಾ.ಗೀತಾಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಕಾರ್ಯದರ್ಶಿ ಮನೋಜ್ ಕುಮಾರ್ ರೈ, ಕೋಶಾಧಿಕಾರಿ ಮೊಹಮ್ಮದ್ ಖಲಂದರ್ ಹಾಗೂ ಲಯನ್ಸ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here