ಬಂಟ್ವಾಳ : ಹಿಂದೂ ಜನಜಾಗೃತಿ ಸಮಿತಿಯಿಂದ ಭದ್ರಕಾಳಿ ದೇವಸ್ಥಾನ, ಶಿವಾಜಿ ನಗರ ಬೆಂಜನ ಪದವು, ಮಂಗಳೂರನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನಗೊಂಡಿತು.
ಸಭೆಯು ದೀಪ ಪ್ರಜ್ವಲನೆ ಯೊಂದಿಗೆ ಪ್ರಾರಂಭವಾಯಿತು. ಸಭೆಯಲ್ಲಿ ಮುಖ್ಯ ವಕ್ತಾರರಾದ ಪುತ್ತೂರು ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕರಾದ  ಕೊಡ್ಮಾನ್   ಕಾಂತಪ್ಪ ಶೆಟ್ಟಿ ಮಾತನಾಡುತ್ತಾ ಇಂದು ನಮ್ಮವರೇ  ಆಗಿರುವ ಹಿಂದೂಗಳು ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮವರೇ ಇವತ್ತು ಇತರ ಮತೀಯರಿಗೆ ಸಹಾಯ ಮಾಡಿ ಇಂದು ಸಮಾಜದಲ್ಲಿ ಸಂಘಟನೆ ಮಾಡುವುದನ್ನು ತಡೆಯುತ್ತಿದ್ದಾರೆ . ಅದಕ್ಕಾಗಿ ನಾವು ಇಂದು ಜಾತಿ ಭೇದ ಮರೆತು ಹಿಂದೂ  ಸಮಾಜದ ಸಂಘಟನೆಗೆ ಪ್ರಯತ್ನ ಮಾಡಬೇಕಾಗಿದೆ ಮತ್ತು ಒಂದೇ ದೇವರು ಒಂದೇ ಜಾತಿ ಎಂದು ಸಾರಿದ ಸಂತ ಹಾಗೂ ಗುರುಗಳಾದ ನಾರಾಯಣಗುರು
ಸ್ವಾಮಿ  ಅವರು ಹಿಂದುಗಳು ಸಂಘಟಿತರಾಗಬೇಕು ಎಂದು ಬಹಳ ಪ್ರಯತ್ನ ಮಾಡಿದರು ಅದರ ಫಲಶೃತಿಯಾಗಿ ಅಂದು ಬಹಳಷ್ಟು ಬದಲಾವಣೆಗಳು ಆಯಿತು. ಹಿಂದೂ ಜನಜಾಗೃತಿ ಸಮಿತಿ ಕಾರ್ಯದಲ್ಲಿ ನಾವು ಸಹ ಕೈ ಜೋಡಿಸ ಬೇಕೆಂದು ವಕ್ತಾರರು ತಿಳಿಸಿದರು.
ದ.ಕನ್ನಡ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೆರವರು ಮಾತನಾಡುತ್ತ ಇವತ್ತು ಜಾತ್ಯಾತೀತತೆಯಿಂದ ಹಿಂದೂ ಧರ್ಮದ ಮೇಲೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದೆ ,ಜಾತ್ಯತೀತ ವ್ಯವಸ್ಥೆ ನಮ್ಮ ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ರಕ್ಷಣೆಯನ್ನು ಮಾಡಲಿಲ್ಲ .ಅಲ್ಪಸಂಖ್ಯಾತರ  ತುಷ್ಟಿಕರಣದಿಂದ ಹಿಂದೂ ಧರ್ಮ ಮತ್ತು ಸಮಾಜಕ್ಕೆ ದೊಡ್ಡ ಹಾನಿಯಾಗುತ್ತಿದೆ  ಮತ್ತು ಇವತ್ತು ದೇಶವ್ಯಾಪ್ತಿ CAA ಕಾನೂನಿನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ದಂಗೆ ,ಅಂದೋಲನ ದೊಡ್ಡಪ್ರಮಾಣದಲ್ಲಿ ಮಾಡುತ್ತಿದ್ದಾರೆ ಇದು ದೇಶವಿರೋಧಿ ಕೃತಿಯಾಗಿದೆ .ಶಾಹಿನಾ ಭಾಗ್ ನಲ್ಲಿ ಅಂದೋಲನ ದೇಶ ವಿರೋಧಿಯಾಗುತ್ತಿದೆ ಎಂದು ತಿಳಿಸಿದರು ಮತ್ತು ನಾವೆಲ್ಲ ಹಿಂದು ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
 ಸನಾತನ ಸಂಸ್ಥೆಯ ಸಂಗೀತ ಪ್ರಭು ಅವರು ಮಾತನಾಡುತ್ತ ಇಂದು ಹಿಂದುಗಳು ಧರ್ಮಾಚರಣೆಯನ್ನು ಬಿಟ್ಟಿದ್ದಾರೆ ನಮ್ಮ ಶ್ರೇಷ್ಠ ಸಂಸ್ಕೃತಿಯ ಸಂಸ್ಕಾರದ ಆಚರಣೆ ಮಾಡುತ್ತಿಲ್ಲ ಇವತ್ತು ನಾವು ಅದರಲ್ಲಿ ಸ್ತ್ರೀಯರು ಧರ್ಮಾಚರಣೆಯನ್ನು ಮಾಡುವ ಅವಶ್ಯಕತೆ ಇದೆ .
ಧರ್ಮ ದ ಆಚರಣೆಯಿಂದ ನಮಗೆ ಈಶ್ವರನ ಶಕ್ತಿ ಸಿಗುತ್ತದೆ ಎಂದು ಹೇಳಿದರು.
ಸೂತ್ರಸಂಚಾಲನವನ್ನು ಉಪೇಂದ್ರ ಆಚಾರ್ಯ ಮಾಡಿದರು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಪ್ರಭಾಕರ್ ನಾಯಕ್ ತಿಳಿಸಿದರು.
ನವೀನ ಕುಮಾರ್,  ಸತೀಶ್, ಭಧ್ರಕಾಳಿ ದೇವಸ್ಥಾನದ  ರಮೇಶ, ಬಜರಂಗದಳದ ಬಂಟ್ವಾಳ ತಾಲ್ಲೂಕಿನ  ಸುರೇಶ ಕುಮಾರ್, ಸ್ಥಳೀಯರಾದ  ಪ್ರವೀಣ ಬಾಬ ಮುಂತಾ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದಾರು ಮತ್ತು ಇವರ ಸಹಕಾರದಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ಯಶ್ವಿಸಿಯಾಗಿ ನೆರವೇರಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here