ಬಂಟ್ವಾಳ: ಕೊರೊನೊ ಶಂಕಿತ ವ್ಯಕ್ತಿಯನ್ನು ಬಂಟ್ವಾಳ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಲ್ಲಿ ದಾಖಲು ಮಾಡಲಾಗಿದೆ.

ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ತಪ್ಪಿಸಿದ ವ್ಯಕ್ತಿ ಬಂಟ್ವಾಳ ದ ಗ್ರಾಮವೊಂದಕ್ಕೆ ಆಗಮಿಸಿದ್ದು , ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು
ಆಬಳಿಕ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ಹಾಗೂ ಆರೋಗ್ಯ ಧಿಕಾರಿ ದೀಪಾ ಪ್ರಭು ಅವರ ತಂಡ ಈತನ ನ್ನು ಪತ್ತೆ ಹಚ್ಚಿ ಈತನ ರಕ್ತ ಪರೀಕ್ಷೆ ಗಾಗಿ ಮತ್ತು ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ಘಟಕದಲ್ಲಿರಿಸಲಾಗಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗಳಲ್ಲಿ ತಪಸಣಾ ಕಾರ್ಯಗಳು ನಡೆಯುತ್ತಿದ್ದು, ರವಿವಾರ ವಿದೇಶದಿಂದ ಬಂದಿರುವ ವ್ಯಕ್ತಿಯೋರ್ವನಲ್ಲಿ ಜ್ವರದ ಲಕ್ಣಣಗಳು ಕಂಡು ಬಿಂದಿತ್ತು.

ವಿದೇಶ ದಿಂದ ಆಗಮಿಸಿದ ವ್ಯಕ್ತಿಯೋರ್ವನಿಗೆ ಜ್ವರ ದ ಹಿನ್ನೆಲೆಯಲ್ಲಿ ಆತನ ಹೆಚ್ಚಿನ ತಪಾಸಣೆ ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಆದರೆ ಆತ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು ಆತನ ಪತ್ತೆ ಕಾರ್ಯಚರಣೆ ನಡೆಸಿದ್ದರು.

ಬಂಟ್ವಾಳ ತಾಲೂಕಿನ ಯಾವ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಎಂಬ ಬಗ್ಗೆ ಯೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಈವರಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಸಿಂದೂ ರೂಪೇಶ್ ನೀಡಿದ್ದಾರೆ.

ಕೊರೊನೊ ವೈರಸ್ ಹರಡದಂತೆ ದ.ಕ.ಜಿಲ್ಲೆಯ ಲ್ಲಿ ಮುನ್ನೆಚ್ಚರಿಕೆ ಯ ಕ್ರಮಗಳು ಮುಂದುವರಿದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here