ವಿಟ್ಲ: ಒಡಿಯೂರು ಶ್ರೀ ಚಾರೀಟೇಬಲ್ ಟ್ರಸ್ಟ್(ರಿ.) ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್(ಪಿ.ಎಂ.-ಎಸ್.ವೈ.ಎಂ) ಪಿಂಚನಿ ಯೋಜನೆ, ಮಾಹಿತಿ ಮತ್ತು ನೊಂದಾವಣೆ ಕಾರ್ಯಾಗಾರ ಮಾಹಿತಿ ಕಾರ್ಯಕ್ರಮವು ಭಾರತ ಸರಕಾರ ಕಾರ್ಮಿಕರ ಇಲಾಖೆ, ಬೀಡಿ ಕಾರ್ಮಿಕರ ಆಸ್ಪತ್ರೆ ಕಲ್ಲಡ್ಕ ಸಹಕಾರದಲ್ಲಿ ವಿಟ್ಲ ಚಂದಳಿಕೆ ಭಾರತ್ ಅಡಿಟೋರಿಯಂನ ಸಹಯೋಗದಲ್ಲಿ ನಡೆಯಿತು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರಾದ ಗಣೇಶ್ ರೈ ಗಮಿ ಕಾರ್ಯಕ್ರಮ ಉದ್ಘಾಟಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕರಾದ ಕಿರಣ್ ಉರ್ವ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಮುಖ್ಯ ಅತಿಥಿಗಳಾಗಿ ವಿಟ್ಲದ ಉದ್ಯಮಿ ಡಿ.ಸಂಜೀವ ಪೂಜಾರಿ, ಕಲ್ಲಡ್ಕ ಬೀಡಿ ಕಾರ್ಮಿಕರ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ|ಸುಮತಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವಿಟ್ಲ ಶಾಖೆಯ ವ್ಯವಸ್ಥಾಪಕ ಸದಾಶಿವ ಶೆಟ್ಟಿ ಕನ್ಯಾನ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ವಿಟ್ಲ ಆರ್.ಕೆ.ಕನ್‌ಸ್ಟ್ರಕ್ಷನ್ಸ್‌ನ ರಾಮ ಮೂಲ್ಯ ಉಪಸ್ಥಿತರಿದ್ದರು.
ಕೃಪಾ ಆಶಯ ಗೀತೆ ಹಾಡಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸೇವಾ ದೀಕ್ಷಿತೆ ದಯಾ ಸ್ವಾಗತಿಸಿದರು. ಸಂಯೋಜಕಿ ಲೀಲಾ ವಂದಿಸಿದರು. ಸೇವಾದೀಕ್ಷಿತೆ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪಿಂಚಣಿ ಯೋಜನೆಯ ಫಲಾನುಭವಿಗಳ ನೋಂದಾವಣೆ ಮಾಡಲಾಯಿತು. ಬೀಡಿ ಕಾರ್ಮಿಕ ಆಸ್ಪತ್ರೆಯ ಸಿಬ್ಬಂದಿ ವರ್ಗ ಮತ್ತು ವಿಟ್ಲ ಸ್ಪೈಡರ್ ನೆಟ್ ಸೈಬರ್‌ನ ಶಿವಾನಂದ ಶೆಟ್ಟಿ ಮತ್ತು ಬಳಗ ಮತ್ತು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳು ನೊಂದಾವಣೆಗೆ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here