


ವಿಟ್ಲ: ಪುಣಚ ಗ್ರಾಮದ ನೀರುಮಜಲು ಶ್ರೀಬ್ರಹ್ಮ ಬೈದರ್ಕಳ ಗರಡಿಯಲ್ಲಿ ನೇಮೋತ್ಸವ ಮಾ.7 ರಂದು ನಡೆಯಲಿದೆ. ಬೆಳಗ್ಗೆ ಗಣಪತಿ ಹೋಮ, ಶುದ್ಧ ಕಲಶಾದಿ ಹೋಮ, ತಂಬಿಲ ಸೇವೆ ನಡೆಯಲಿದೆ. ರಾತ್ರಿ ಶ್ರೀ ಗರಡಿ ಕ್ಷೇತ್ರದಲ್ಲಿ ಶ್ರೀ ಬೈದರ್ಕಳ ಗರಡಿ ಇಳಿಯುವುದು, ಬಳಿಕ ಆಯುಧ ಒಪ್ಪಿಸುವಿಕೆ, ಮಾಯಾಂದಾಳ್ ದೇವಿಯ ಉತ್ಸವ, ಪೂಜಾರಿಗಳ ಸೇಟು, ಬೈದರ್ಕಳ ಸೇಟು, ಪ್ರಸಾದ ವಿತರಣೆ ನಡೆಯಲಿದೆ.
,





