ವಿಟ್ಲ: ಭಾರತೀಯ ಕೃಷಿ ಸಂಧಾನ ಪರಿಷತ್‌ನ ವಿಟ್ಲ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಕೊಚ್ಚಿನ್ ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯ, ಕೇಂದ್ರೀಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಕೊಕ್ಕೊ ಬೆಳೆ ಉತ್ಪಾದನೆ ಮತ್ತು ಸಂಸ್ಕರಣೆ, ತಾಂತ್ರಿಕತೆ ಬಗ್ಗೆ ಜಿಲ್ಲಾಮಟ್ಟದ ವಿಚಾರ ಸಂಕಿರಣ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ವಿಚಾರ ಸಂಕಿರಣವನ್ನು ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು, ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದಪ್ಪ ನಾಯ್ಕ್ ಭಾಗವಹಿಸಿದ್ದರು.
ವಿಟ್ಲ ಸಿಪಿಸಿಆರ್‌ಐನ ಹಿರಿಯ ವಿಜ್ಞಾನಿ ಡಾ.ಎಲೈನ್ ಅಪ್ಸರಾ ಅಧಿಕ ಇಳುವರಿ ಕೊಡುವ ಕೊಕ್ಕೊ ತಳಿಗಳು ಮತ್ತು ನರ್ಸರಿ ತಂತ್ರಗಾರಿಕೆ, ಉತ್ಪಾದನಾ ತಂತ್ರಜ್ಞಾನಗಳು, ಸಮಗ್ರ ಪೋಷಕಾಂಶ, ಕೀಟ ಮತ್ತು ರೋಗಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಅಡಕೆ ಮತ್ತು ಕೊಕ್ಕೊ ಕೃಷಿ ಪದ್ಧತಿಯಲ್ಲಿಮಣ್ಣು ಮಾದರಿ ಸಂಗ್ರಹ ವಿಧಾನ, ಕೊಕ್ಕೊ ಮೃದು ಕಾಂಡ ಕಸಿ, ಬೋರ್ಡೋ ಮಿಶ್ರಣ, ಪೇಸ್ಟ್ ಮತ್ತು ಟ್ರೈಕೊಡರ್ಮ ತಯಾರಿಕೆ, ಹುಳಿ ಬರಿಸುವಿಕೆ, ಸಂಸ್ಕರಣೆ ವಿಧಾನದ ಬಗ್ಗೆ ಸ್ಲೈಡ್ ಶೋ ನಡೆಸಲಾಯಿತು.
ಸಿಪಿಸಿಆರ್‌ಐನ ತಾಂತ್ರಿಕ ಅಧಿಕಾರಿ ಪುರಂದರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೆಂಕಪ್ಪ ಗೌಡ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here