ಬಂಟ್ವಾಳ: ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ ವೇಳೆ ನಡೆದಿದೆ.
ವಗ್ಗ ಕಾರಿಂಜಕೋಡಿ ನಿವಾಸಿ ಅರವಿಂದ ರಾವ್ ಅವರ ಪುತ್ರ ಬಂಟ್ವಾಳ ಎಸ್.ವಿ.ಎಸ್. ಸ್ಕೂಲ್ ನ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ನಂದನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಸ್.ಎಸ್. ಎಲ್.ಸಿ.ಯಲ್ಲಿ 94 ಪರ್ಸೆಂಟ್ ಮಾರ್ಕ್ಸ್ ಪಡೆದಿದ್ದ ಈತ, ಪಿಯುಸಿಯಲ್ಲೂ ಅಷ್ಟೇ ಪ್ರತಿಭಾವಂತನಾಗಿದ್ದ.
ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ. ಭೌತಶಾಸ್ತ್ರ ಪತ್ರಿಕೆ ಕಷ್ವವಿತ್ತು ಹಾಗಾಗಿ ಈತ ನಿರೀಕ್ಷೆ ಮಾಡಿದ ಅಂಕಗಳು ಪರೀಕ್ಷೆಯಲ್ಲಿ ಬರಲಿಕ್ಕಿಲ್ಲ ಎಂಬ ಭಾವನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದಿಟ್ಟಿದ್ದಾನೆ.
ರಾತ್ರಿ ಸುಮಾರು 12 ಗಂಟೆಯವರೆಗೂ ಈತ ಓದುತ್ತಿದ್ದು, ತಾಯಿ 12.30ಕ್ಕೆ ಎಚ್ಚರಗೊಂಡು ನೋಡುವಾಗ ಈತ ಮನೆಯಲ್ಲಿರಲಿಲ್ಲ. ಕೂಡಲೇ ಹುಡುಕಾಟ ನಡೆಸಿದಾಗ, ಆತನ ಮೊಬೈಲ್ ಫೋನ್ ತೋಟದಲ್ಲಿ ಪತ್ತೆಯಾಗಿದೆ. ಅಲ್ಲೇ ಪಕ್ಕದ ಬಾವಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್‌.ಐ. ಪ್ರಸನ್ನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here