ಬಂಟ್ವಾಳ: ಕ್ರೈಸ್ತ ರ ನಂಬಿಕೆಯ ಆರಾಧನೆಯ ಮೂರ್ತಿಯನ್ನು ವಿರೂಪಗೊಳಿಸಿ ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ ನಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಕಾಂಗ್ರೇಸ್ ಮುಖಂಡನ ವಿರುದ್ದ ಪ್ರಕರಣ ದಾಖಲಾಗಿದೆ.
ಯುವ ಕಾಂಗ್ರೇಸ್ ಅಧ್ಯಕ್ಷ ಕಲ್ಲಡ್ಕ ನೆಟ್ಲ ನಿವಾಸಿ ಪ್ರಶಾಂತ್ ಕುಲಾಲ್ ಯಾನೆ ಮುನ್ನ ಎಂಬವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ಅವರು ಅವರ ಪೇಸ್ ಬುಕ್ ನಲ್ಲಿ ನಿಶಾಂತ್ ಮಂಡಗದ್ದೆ ಎಂಬವರು ಹಾಕಿದ ಪೋಸ್ಟ್ ಒಂದನ್ನು ಶೇರ್ ಮಾಡಿ ಕ್ರೈಸ್ತ ಸಮುದಾಯಕ್ಕೆ ನೋವು ಮಾಡಿದ್ದಾರೆ ಎಂದು ಬಂಟ್ವಾಳ ಬಿಜೆಪಿ ಮುಖಂಡ ರೋನಾಲ್ಡ್ ಡಿ.ಸೋಜ ದೂರಿನಲ್ಲಿ ತಿಳಿಸಿದ್ದಾರೆ.
ಕ್ರೈಸ್ತ ರ ಸರ್ವತೋಮುಖ ಅಭಿವೃದ್ಧಿಗೆ ರೂ.200 ಕೋಟಿ ಮೀಸಲಿಟ್ಟ ಬಿ.ಎಸ್.ಯೇಸುಕ್ರಿಸ್ತ!! ಎಂಬ ಬರಹದ ಕೆಳಗೆ ಯೇಸು ಕ್ರಿಸ್ತರ ಭಾವಚಿತ್ರ ಕ್ಕೆ ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಖವನ್ನು ಜೋಡಿಸಿ ವಿರೂಪಗೊಳಿಸಲಾಗಿದೆ.
ಬಳಿಕ ಕೆಳಗೆ ಕಾಂಗ್ರೇಸ್ ಸಮ್ಮಿಶ್ರ ಸರಕಾರ ಕ್ರೈಸ್ತ ರ ಅಭಿವೃದ್ಧಿ ಗೆ ಹಣ ನೀಡಿದರೆ ಒಲೈಕೆ
ಬಿಜೆಪಿಗರು ನೀಡಿದರೆ ಅದು ಆರೈಕೆ ಎಂಬ ಬರಹ ಹಾಕಿದ ಪೋಸ್ಟ್ ಒಂದನ್ನು ಪ್ರಶಾಂತ್ ಕುಲಾಲ್ ಶೇರ್ ಮಾಡಿದ್ದಾರೆ. ಇದು ಕ್ರೈಸ್ತ ಸಮುದಾಯಕ್ಕೆ ನೋವಾಗಿದ್ದು, ಇವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ರೊನಾಲ್ಡ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here