


ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಿಂದ ಮುಳುಗಡೆಯಾಗುವ ಜಮೀನಿಗೆ ನೆಲ ಬಾಡಿಗೆ ಹಾಗೂ ಶಾಶ್ವತ ಪರಿಹಾರ ಸಿಗದೆ ಇರುವ ರೈತರ ಸಮಸ್ಯೆ ಪರಿಹರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಮಾಡಿ ಸಮಸ್ಯೆ ಪರಿಹಾರ ಮಾಡುವಂತೆ ಅಗ್ರಹಿಸಿದ್ದಾರೆ.
ನೂತನ ತುಂಬೆ ಡ್ಯಾಮಿನಲ್ಲಿ ಐದು ಮೀಟರ್ ಹಾಗೂ ಆರು ಮೀಟರ್ ನೀರು ಸಂಗ್ರಹಗೊಂಡಾಗ ಜಲಾವೃತವಾದ ಭೂಪ್ರದೇಶಕ್ಕೆ ನೆಲ ಬಾಡಿಗೆ ಹಾಗೂ ಶಾಶ್ವತ ಪರಿಹಾರ ಸಿಗದೆ ಇರುವ ರೈತರ ಸಮಸ್ಯೆ ಪರಿಹರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಜಿಲ್ಲಾಧಿಕಾರಿಗಳನ್ನು ಹೋರಾಟ ಸಮಿತಿಯ ನಿಯೋಗ ಎನ್. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಭೇಟಿಯಾಗಿ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದ್ದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಡಿ.10ರ ಒಳಗೆ ಸಂತ್ರಸ್ತರ ಸಭೆ ಕರೆದು ಅಧಿಕಾರಿಗಳು ಜನಪ್ರತಿನಿಧಿಗಳು ಸಮಸ್ಯೆಯನ್ನು ಪರಿಹರಿಸುವುದು ತಿಳಿಸಿದ್ದರು.
ಆ ಪರಿಹಾರವೂ ಸಿಕ್ಕಿಲ್ಲ ಸಭೆಯ ನಡೆಯದಿದ್ದಾಗ ಮತ್ತೆ ಭೇಟಿಯಾದ ರೈತರಿಗೆ ಜಿಲ್ಲಾಮಟ್ಟದ ರೈತರ ಕುಂದುಕೊರತೆ ಸಭೆಯಲ್ಲಿ ತುಂಬೆ ಡ್ಯಾಂ ಸಂತ್ರಸ್ತ ರೈತರ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು ಫೆ.12 ರಂದು ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ತುಂಬೆ ಡ್ಯಾಂ ಸಂತ್ರಸ್ತರ ಸಮಸ್ಯೆ ಫೆ.25 ಒಳಗೆ ಸಭೆ ಜರಗಿಸಿ ಪರಿಹರಿಸುವುದಾಗಿ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಪರಿಹರಿಸುವುದಾಗಿ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ತಿಳಿಸಿದರು ಆದರೆ ಈತನಕ ತುಂಬೆ ಡ್ಯಾಂ ಸಂತ್ರಸ್ತ ರೈತರ ಸಭೆ ವ್ಯವಸ್ಥೆ ಆಗಿರುವುದಿಲ್ಲ ಕಳೆದ 16 ವರ್ಷಗಳಿಂದ ತುಂಬೆ ಡ್ಯಾಂ ಸಂತ್ರಸ್ತ ರೈತರನ್ನು ಜಿಲ್ಲಾಡಳಿತ ವಿಶ್ವಾಸಕ್ಕೆ ತೆಗೆದುಕೊಳ್ಳದೆ ರೈತರಿಗೆ ಅನ್ಯಾಯವಾಗುತ್ತಿದೆ ಜಿಲ್ಲಾಡಳಿತ ರೈತರ ಸಮಸ್ಯೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಚಿಂತಿಸುತ್ತಿದೆ ಕೃಷಿಯನ್ನೇ ನಂಬಿ ಜೀವಿಸುವ ರೈತಾಪಿ ವರ್ಗದ ದೀರ್ಘಕಾಲೀನ ಸಮಸ್ಯೆಯನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ರೈತರ ಹಿತಾಸಕ್ತಿಯನ್ನು ಕಾಪಾಡುವಂತೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಬಂಟ್ವಾಳ ತಾಲೂಕು ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನು ಬಂಟ್ವಾಳ ಶಾಸಕರನ್ನು ಒತ್ತಾಯಿಸಿದ್ದಾರೆ.





