ಬಂಟ್ವಾಳ: ಇಲ್ಲಿನ ಶ್ರೀ ವೆಂಕಟರಮಣ ಸ್ವಾಮೀ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟ್ರೀಯ ಸೇನಾ ದಳ, ರೆಡ್ ರಿಬ್ಬನ್ ಕ್ಲಬ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ರೋವರ್ ಹಾಗೂ ರೇಂಜರ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವೆನ್‌ಲಾಕ್ ಆಸ್ಟತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಗಾಗಿತ್ತು.
ಮುಖ್ಯ ಅತಿಥಿ ಮಂಗಳೂರು ವೆನ್‌ಲಾಕ್ ಆಸ್ಟತ್ರೆ ರಕ್ತನಿಧಿಯ ಪ್ರಧಾನ ವೈದ್ಯಾಧಿಕಾರಿ ಡಾ| ಶರತ್‌ಕುಮಾರ್ ರಾವ್ ಮಾತನಾಡಿ, ರಕ್ತ ಒಂದು ಜೀವ ದ್ರವ, ಪ್ರತಿ ಆರೋಗ್ಯವಂತ ಪುರುಷ-ಮಹಿಳೆಯರಲ್ಲಿ ಸುಮಾರು ೫ರಿಂದ ೬ ಲೀಟರ್ ರಕ್ತ ಇರುತ್ತದೆ. ಪ್ರತಿ ಆರೋಗ್ಯವಂತ ವ್ಯಕ್ತಿಯು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ಸಮಾಜದಲ್ಲಿ ರಕ್ತದ ತುರ್ತು ಆಗತ್ಯವಿರುವ ಹಲವಾರು ಜೀವಗಳನ್ನು ಉಳಿಸಲು ಸಹಕರಿಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮಾತಾನಾಡಿ, ವಿದ್ಯಾರ್ಥಿ ಸಮುದಾಯ ಸ್ವಯಂ ಪ್ರೇರಿತ ರಕ್ತದಾನಕ್ಕೆ ಪ್ರೇರಣೆ ನೀಡುವುದರ ಮೂಲಕ ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವ ಹಿಂಜರಿಕೆ ಮತ್ತು ಅಪಕಲ್ಪನೆಯನ್ನು ದೂರೀಕರಿಸಲು ಸಹಕರಿಸಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ| ಶರತ್‌ಕುಮಾರ್ ರಾವ್ ಹೆಚ್.ಐ.ವಿ./ಏಡ್ಸ್‌ಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹರ್ಷಿತ್ ಮತ್ತು ಮಿಲ್ಟನ್ ಪಿಂಟೋ ಪ್ರಥಮ, ಗಗನ್ ಮತ್ತು ಸಂದೇಶ್ ದ್ವಿತೀಯ ಮತ್ತು ನಿಶಾ ಮತ್ತು ಪ್ರೀತಿಕಾ ತೃತೀಯ ಬಹುಮಾನ ಪಡೆದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ| ಮಂಜುನಾಥ ಉಡುಪ ಕೆ. ಮತ್ತು ಶಶಿಕಲಾ ಎಂ.ಪಿ., ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಸುಂದರ್, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಅಧಿಕಾರಿ ಹರ್ಷಿತಾ ವೇದಿಕೆಯಲ್ಲಿದ್ದರು.
ಡಾ| ಮಂಜುನಾಥ ಉಡುಪ ಕೆ. ಶಿಬಿರವನ್ನು ಸ್ವಾಗತಿಸಿ, ಕ್ಯಾಪ್ಟನ್ ಸುಂದರ್ ವಂದಿಸಿದರು. ಹರ್ಷಿತಾ ಮತ್ತು ಶಿಲ್ಪಾ ಪ್ರಾರ್ಥಿಸಿದರು. ಗೌತಮಿ ಕಾರ್ಯಕ್ರಮ ನಿರೂಪಿಸದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here