ಬೆಂಗಳೂರು: ಏಳನೇ ಬಾರಿಗೆ ಬಜೆಟ್​ ಮಂಡನೆ ಮಾಡಿದ ಸಿಎಂ, ಹಣಕಾಸು ಸಚಿವರು ಕೂಡ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಈ ಸಾಲಿನ ಬಜೆಟ್ ನಲ್ಲಿ ರೈತ ನಾಯಕ ಬಿ.ಎಸ್.ವೈ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಇಂದಿನ ಬಜೆಟ್ ಮಂಡನೆ ಮುಗಿದಿದ್ದು, ಇನ್ನು ನಾಳೆ ಬೆಳಗ್ಗೆ 10.30ಕ್ಕೆ ಬಜೆಟ್ ಅಧಿವೇಶನ ಮುಂದೂಡಿಕೆ. ರಾಜ್ಯದ ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂಪಾಯಿ ಆಗಿದೆ.

ಸಿಎಂ ಬಿಎಸ್ ವೈ ಮಂಡಿಸಿದ ಬಜೆಟ್ ನ ಪ್ರಮುಖಾಂಶಗಳು ಇಂತಿವೆ:

 • ಮಹದಾಯಿ ಯೋಜನೆಗೆ 500 ಕೋಟಿ
 • ಮೀನುಗಾರರಿಗೆ ಕಿಸಾನ್ ಕಾರ್ಡ್ ವಿತರಣೆ
 • ಕ್ರೈಸ್ತ ಸಮುದಾಯಕ್ಕೆ 200 ಕೋಟಿ
 • ಆರ್ಯ ವೈಶ್ಯ ನಿಗಮಕ್ಕೆ 10 ಕೋಟಿ
 • ವಿಶ್ವಕರ್ಮ ಸಮುದಾಯಕ್ಕೆ 25 ಕೋಟಿ
 • 276 ಪಬ್ಲಿಕ್ ಶಾಲೆಗಳಿಗೆ 100 ಕೋಟಿ
 • ಶನಿವಾರ ಮಕ್ಕಳಿಗೆ ಶಾಲಾ ಬ್ಯಾಗ್ ಇಲ್ಲ
 • ಪ್ರತಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ
 • ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ
 • ಎಸ್‌ಟಿ ಎಸ್‌ಸಿ ವಿದ್ಯಾರ್ಥಿಗಳಿಗೆ ಒಂದು ಲಕ್ಷ ನೀಡಲು ಕ್ರಮ
 • 10 ಲಕ್ಷ ಮನೆಗಳಿಗೆ ಗಂಗೆ ನೀರು ಸೌಲಭ್ಯ
 • ಅಬಕಾರಿ ಸುಂಕ ಶೇ. 6ರಷ್ಟು ಏರಿಕೆ
 • ಪೆಟ್ರೋಲ್ ಡಿಸೇಲ್ ದರ ಏರಿಕೆ
 • ಪೆಟ್ರೋಲ್, ಡಿಸೇಲ್ ಮೇಲೆ ಶೇ 3ರಷ್ಟು ತೆರಿಗೆ
 • ಭಾಗ್ಯಲಕ್ಷ್ಮಿ, ಬೈಸಿಕಲ್​ ಯೋಜನೆ ಮುಂದುವರಿಕೆ
 • ಪ್ರಧಾನಮಂತ್ರಿ ಕಿಸಾನ್​ ಯೋಜನೆಗೆ ₹4,000
 • ಸಣ್ಣ, ಅತಿಸಣ್ಣ ರೈತರಿಗೆ ₹10,000 ನೆರವು​
 • ಕಟ್ಟಡ ಕಾರ್ಮಿಕರು & ಸದಸ್ಯರಿಗೆ ಉಚಿತ ಪ್ರೀಪೇಯ್ಡ್ ಹೆಲ್ತ್ ಕಾರ್ಡ್
 • ನೆರೆಯಿಂದ ಬಿದ್ದಿದ್ದ 842 ಅಂಗನವಾಡಿಗಳ ಪುನರ್ ನಿರ್ಮಾಣ
 • ಹಾವೇರಿಯಲ್ಲಿ 20 ಹಾಸಿಗೆಗಳ ಆಯುಷ್ ಆಸ್ಪತ್ರೆ
 • 17 ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಎನ್‌ಐಸಿಯು ಉನ್ನತೀಕರಣ
 • 400 ಉರ್ದು ಶಾಲೆಗಳಲ್ಲಿ ಉರ್ದು ಮಾದ್ಯಮದೊಂದಿಗೆ ಆಂಗ್ಲ ಮಾದ್ಯಮ ಆರಂಭ
 • ಬೆಂಗಳೂರು ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಗೆ 10 ಕೋಟಿ
 • ಇಸ್ರೋ, ಎಚ್.ಎ.ಎಲ್ ಇತ್ಯಾದಿ ಪ್ರತಿಷ್ಟಿತ ಸಂಸ್ಥೆಗಳಿಗೆ ಲಘು‌ ಯುದ್ಧ ವಿಮಾನ, ಮದ್ಯಮ ಯುದ್ಧ ವಿಮಾನ ಬಿಡಿ ಭಾಗಗಳನ್ನು ಉತ್ಪಾದಿಸಲು ಸರ್ಕಾರಿ ಉಪಕರಣ ಮತ್ತು ತರಭೇತಿ ಕೇಂದ್ರಗಳಿಗೆ 20 ಕೋಟಿ ಅನುದಾನ
 • ಪೊಲೀಸ್ ಸಿಬ್ಬಂದಿಗೆ ಗೃಹ ಭಾಗ್ಯ ಯೋಜನೆ, ಗೃಹಭಾಗ್ಯ ಯೋಜನೆಗೆ 200 ರೂ. ಕೋಟಿ ರೂ. ಮೀಸಲು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here